Advertisement

ಸಿಂಧನೂರು: ತಾಯಿ ಮಕ್ಕಳ ಆಸ್ಪತ್ರೆ ಸ್ಥಳ ವಿವಾದ ಇತ್ಯರ್ಥಕ್ಕೆ ಸರ್ವಪಕ್ಷ  ಸಭೆ

12:44 PM Feb 05, 2022 | Team Udayavani |

ಸಿಂಧನೂರು: ನಗರದಿಂದ ದೂರದಲ್ಲಿರುವ ಕಲ್ಲೂರು ಗ್ರಾಮದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣ ಬೇಡ ಎಂಬ ವಿವಾದ ಕೊನೆಗೂ ತಾರ್ಕಿಕ ತಿರುವು ಪಡೆದಿದೆ.

Advertisement

ನೀರಾವರಿ ಇಲಾಖೆಯ ಜಾಗ ಪಡೆದುಕೊಳ್ಳುವ ಪ್ರಯತ್ನ ಆರಂಭವಾಗಿದ್ದು, ಫೆ.14 ರಂದು ಬೆಂಗಳೂರಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ.

ಶಾಸಕ‌ ವೆಂಕಟರಾವ್ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಹಶೀಲ್ ಕಚೇರಿಯಲ್ಲಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಆಸ್ಪತ್ರೆ ನಿರ್ಮಿಸಲು ಹೊಸ ಹುಡುಕಾಟದ ಬಗ್ಗೆ ಪ್ರಸ್ತಾಪಿಸಲಾಯಿತು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು, ಪಿಡಬ್ಲ್ಯುಡಿ ಕ್ಯಾಂಪಿನಲ್ಲಿರುವ ನೀರಾವರಿ ಇಲಾಖೆಯಲ್ಲಿ 29 ಎಕರೆ ಜಮೀನಿನ ಪೈಕಿ ಕೆಲವು ಕಡೆ ಖಾಲಿಯಿದೆ. ಆಸ್ಪತ್ರೆಗೆ ಬೇಕಾದ ಜಾಗವನ್ನು ಅಲ್ಲಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಯಾವುದೇ ಕಾರಣಕ್ಕೂ ಕಲ್ಕೂರು ಗ್ರಾಮದ ಸ್ಮಶಾನದಲ್ಲಿ ಆಸ್ಪತ್ರೆ ನಿರ್ಮಿಸಲು ಒಪ್ಪುವುದಿಲ್ಲ ಎಂದು ಬಸನಗೌಡ ಬಾದರ್ಲಿ ಆಕ್ಷೇಪಿಸಿದರು.

Advertisement

ಬಳಿಕ ನೀರಾವರಿ ಇಲಾಖೆಯ ಜಾಗವನ್ನು ಆರೋಗ್ಯ ಇಲಾಖೆಗೆ ಪಡೆದುಕೊಳ್ಳಬೇಕಾದರೆ, ಸರಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಾಗುತ್ತದೆ ಎಂಬ ಬಗ್ಗೆ ಚರ್ಚಿಸಲಾಯಿತು‌.

ಸರಕಾರದಿಂದ ಈ ಕುರಿತು ಆದೇಶ ಪಡೆಯುವುದಕ್ಕಾಗಿ ಬೆಂಗಳೂರಿಗೆ ನಿಯೋಗ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ನಗರ ಯೋಜನಾ‌ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ್ ಸಾಲಗುಂದಾ  ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next