ಹುಬ್ಬಳ್ಳಿ: ತಾನು ಸಭಾಪತಿ ಆಗುವುದಕ್ಕೆ ಮೂರು ಪಕ್ಷಗಳಲ್ಲೂ ಸಹಮತವಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಹ ಸಮ್ಮತಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಅನೇಕರು ಒಲವು ತೋರಿದ್ದಾರೆ ಎಂದರು.
ಪರಿಷತ್ ನಲ್ಲಿ ನಮ್ಮ ಪಕ್ಷವನ್ನು ಹೊರಗಿಟ್ಟು ಯಾರು ಅಧಿಕಾರ ಹಿಡಿಯಲಾಗದು ಎಂದ ಅವರು, ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸೂಕ್ಷ್ಮ ವ್ಯಕ್ತಿತ್ವದವರಾಗಿದ್ದಾರೆ ಎಂಬುದನ್ನು ಬಲ್ಲೆ ಎಂದು ನುಡಿದರು.
ಇದನ್ನೂ ಓದಿ:ಸಿಎಂ ಬದಲಾವಣೆ ಖಚಿತ ಎನ್ನುವ ಸಿದ್ದರಾಮಯ್ಯ ಜ್ಯೋತಿಷಿಯಾಗಿದ್ದು ಯಾವಾಗ? ಸಚಿವ ಬಿ ಎ. ಬಸವರಾಜ
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಇಲ್ಲವೆ ಮೈತ್ರಿ ಏನು ಇಲ್ಲ. ನಮ್ಮ ಬೆಂಬಲ ಸಭಾಪತಿ ಸ್ಥಾನ, ಪರಿಷತ್ ಗೆ ಮಾತ್ರ ಸೀಮಿತ ಎಂದರು.