Advertisement
ಆ. 14ರಂದು ಸಂಜೆ ವಸಾಯಿ ಪಶ್ಚಿಮದ ಸ್ವರ್ಣ ಬ್ಯಾಂಕ್ವೆಟ್ಸ್ ಮೂರನೇ ಮಾಳಿಗೆ, ದತ್ತಾನಿ ಸ್ಕ್ಯೆಯರ್ ಮಾಲ್ ಇಲ್ಲಿ ನಡೆದ ಮೀರಾ-ಡಹಾಣು ಬಂಟ್ಸ್ ಇದರ ನಾಯ್ಗಾಂವ್-ವಿರಾರ್ ಪ್ರಾದೇಶಿಕ ಸಮಿತಿಯ ವತಿಯಿಂದ ಆಟಿದ ಕೂಟ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು, ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಭಾ ಕಾರ್ಯಕ್ರಮಗಳಿಗಿಂತ ಸಾಂಸ್ಕೃತಿಕ ಕಾರ್ಯಕ್ರಮಗಳೇ ಆಕರ್ಷಣೀಯ. ನಮ್ಮ ಮಕ್ಕಳು ಬಹುಮುಖ ಪ್ರತಿಭೆಯುಳ್ಳವರು. ದೇಶ ವಿದೇಶದಲ್ಲಿ ಬಂಟ ಸಮುದಾಯದ ಸುಮಾರು 112 ಸಂಘಟನೆಗಳಿದ್ದು, ವಿದೇಶದಲ್ಲಿರುವ ನಮ್ಮವರ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲಿ ಅವರಿಗೆ ಬಹಳ ಸಂತೋಷವಾಗುತ್ತದೆ. ನಮಗೆ ಎಷ್ಟು ಸಂಘಟನೆಗಳಿದ್ದರೂ ಕುರ್ಲಾದ ಬಂಟರ ಸಂಘವು ನಮ್ಮೆಲ್ಲರ ಮಾತೃ ಸಂಘವೇ ಆಗಿದೆ ಎಂದರು.
Related Articles
Advertisement
ಪ್ರಾಸ್ತಾವಿಕ ಮಾತುಗಳನ್ನಾಡಿದ ಸ್ಥಳೀಯ ಸಮಿತಿಯ ಸಂಚಾಲಕರಾದ ನಾಗರಾಜ ಎನ್. ಶೆಟ್ಟಿ ಅವರು, ಮೀರಾ ಡಹಾಣು ಬಂಟ್ಸ್ ಸಮಾಜ ಬಾಂಧವರಿಗೆ ಶಿಕ್ಷಣ, ವೈವಾಹಿಕ ಮುಂತಾದ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಸಂಘವು ಸಣ್ಣ ಮಟ್ಟದಲ್ಲಾದರೂ ಇಂತಹ ಕೆಲಸವನ್ನು ಮಾಡುತ್ತಾ ಬಂದಿದೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಿಗೆ ದಾನಿಗಳ ಸಹಕಾರ ಸದಾಯಿರಲಿ ಎಂದರು. ವೇದಿಕೆಯಲ್ಲಿ ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ, ಜಾಗತಿಕ ಮತ್ತು ರಾಷ್ಟ್ರೀಯ ಜಾಗತಿಕ ಹ್ಯುಮನ್ ರೈಟ್ಸ್ ಪೀಪಲ್ಸ್ ಕೌನ್ಸಿಲ್ ಅಧ್ಯಕ್ಷ ಡಾ| ಲಯನ್ ಕೆ. ಟಿ. ಶಂಕರ ಶೆಟ್ಟಿ. ನಾಲಾಸೋಪಾರ ವಿರಾರ್ ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ರವಿ ಬಿ. ಶೆಟ್ಟಿ, ವಿರಾರ್-ವಸಾಯಿ ನಗರ ಸೇವಕಿ, ಮಾಟುಂಗಾದ ಸರಕಾರಿ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕಿ ಡಾ| ಸಂಧ್ಯಾ ವಿ. ಶೆಟ್ಟಿ, ಮೀರಾ-ಭಾಯಂದರ್ ಬಂಟ್ಸ್ ಫೋರಂನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೀರಾ-ಡಹಾಣು ಬಂಟ್ಸ್‌ನ ಸ್ಥಾಪಕ ಅಧ್ಯಕ್ಷ ಪ್ರಕಾಶ್ ಎಂ. ಹೆಗ್ಡೆ, ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಟ್ರಸ್ಟಿ ಸುರೇಶ್ ಶೆಟ್ಟಿ ಗಂಧರ್ವ, ಟ್ರಸ್ಟಿ ಸಂತೋಷ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಸತೀಶ್ ಶೆಟ್ಟಿ, ಕಾರ್ಯದರ್ಶಿ ಲತಾ ಎ. ಶೆಟ್ಟಿ, ವಲಯದ ಕಾರ್ಯಾಧ್ಯಕ್ಷೆ ಅಶೋಕ್ ಕೆ. ಶೆಟ್ಟಿ, ಸ್ಥಳೀಯ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ , ಜತೆ ಕಾರ್ಯದರ್ಶಿ ನವೀನ್‌ಎಂ. ಶೆಟ್ಟಿ, ಪಳ್ಳಿ ಪ್ರಸನ್ನ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ದಯಾನಂದ ಪಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶ್ರೀನಿವಾಸ ಆಳ್ವ, ಸಂಚಾಲಕ ರಾಧಾಕೃಷ್ಣ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಸುಕೇಶ್ ವಿ. ರೈ, ಕೃಷ್ಣಯ್ಯ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ತಾರಾನಾಥ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿ ಜೆ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿ ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಗುಣಾ ಬಿ. ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಚಂದ್ರಕಲಾ ಆರ್. ಶೆಟ್ಟಿ, ಕಾರ್ಯದರ್ಶಿ ದಿವ್ಯಾ ಜೆ. ರೈ, ಸದಸ್ಯರಾದ ರವಿ ಎಂ. ಶೆಟ್ಟಿ, ಸುಕೇಶ್ ಕೆ. ಶೆಟ್ಟಿ, ಹರೀಶ್ ಶೆಟ್ಟಿ ಬಂಗ್ಲಿ, ಯಶೋದಾ ಎನ್. ಶೆಟ್ಟಿ , ಉಷಾ ವಿ. ಶೆಟ್ಟಿ, ಪ್ರಮೀಳಾ ಬಿ ಶೆಟ್ಟಿ, ಶುಭವತಿ ಕೆ. ಶೆಟ್ಟಿ, ಮಾಲತಿ ಆರ್ ಶೆಟ್ಟಿ, ಸರಿತಾ ಎಸ್. ಶೆಟ್ಟಿ, ಹೇಮಾವತಿ ಆರ್. ಶೆಟ್ಟಿ, ಸುರೇಶ ಶೆಟ್ಟಿ ಮೊದಲಾವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಹೊಟೇಲ್ ಉದ್ಯಮಿಗಳಾದ ಮೋಹನ್ ಬಿ. ಶೆಟ್ಟಿ, ಜಗದೀಶ್ ಶೆಟ್ಟಿ, ರಮೇಶ್ ಬಿ. ಶೆಟ್ಟಿ, ಪ್ರೇಮಾನಂದ ಬಿ. ಶೆಟ್ಟಿ, ವಾಸು ಶೆಟ್ಟಿ ವಿರಾರ್, ವನಿತಾ ಆರ್. ಶೆಟ್ಟಿ, ಸುರೇಶ ಶೆಟ್ಟಿ ಪೂನಂ ನಲಸೋಪಾರ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಮಮತಾ ದೇವಿದಾಸ ಶೆಟ್ಟಿ, ಸರೋಜಾ ಜೆ. ಶೆಟ್ಟಿ, ಸಹಾನಿ ಬಿ. ಶೆಟ್ಟಿ, ಸುಶೀಲಾ ಕೆ. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮವನ್ನು ಸುಕೇಶ್ ರೈ ನಿರೂಪಿಸಿ, ವಂದಿಸಿದರು. ಪ್ರಾರಂಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.