Advertisement

Paris Olympics: ಒಲಿಂಪಿಕ್ಸ್‌ಗೆ ಭಾರತದ ಕ್ರೀಡಾಪಟುಗಳು ಫಿಟ್‌

03:34 PM Jul 19, 2024 | Team Udayavani |

ಹೊಸದಿಲ್ಲಿ: ತಾರಾ ಜಾವೆಲಿನ್‌ ತ್ರೋವರ್‌ ನೀರಜ್‌ ಚೋಪ್ರಾ ಸೇರಿದಂತೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಎಲ್ಲ ಕ್ರೀಡಾಪಟುಗಳು ಸಂಪೂರ್ಣವಾಗಿ ಫಿಟ್‌ ಆಗಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್‌ ಪ್ರಾಧಿಕಾರ (ಐಒಎ) ಪ್ರಕಟಿಸಿದೆ.

Advertisement

ಜು. 26ರಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭವಾಗುತ್ತಿದ್ದು, ಜಾಗತಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಆ್ಯತ್ಲೀಟ್‌ಗಳು ಸ್ಪರ್ಧೆ ನೀಡಲು ಫಿಟ್‌ ಆಗಿದ್ದಾರೆ ಎಂದು ಐಒಎ ಮುಖ್ಯ ವೈದ್ಯಾಧಿಕಾರಿ ಡಾ| ದೀನ್‌ಶಾ ಪಾರ್ದೀವಾಲ ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ 120 ಕ್ರೀಡಾಪಡುಗಳಿಗೆ ತಮ್ಮ 13 ಜನರನ್ನೊಳಗೊಂಡ ತಂಡ ವೈದ್ಯೋಪಚಾರ ನೀಡಲು ಸಿದ್ಧವಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next