Advertisement

ಎಲ್ಲಾ ನಾಮ್‌ಕಾವಾಸ್ತೆ

11:16 PM Apr 10, 2019 | Lakshmi GovindaRaju |

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿಯಡಿ ಸೀಟು ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ಮಾಡಿರುವ ವಿಚಾರ ಐದಾರು ಕ್ಷೇತ್ರಗಳಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸುತಾರಾಂ ಇಷ್ಟವಾಗುತ್ತಿಲ್ಲವಂತೆ.

Advertisement

ಎರಡೂ ಪಕ್ಷಗಳ ನಾಯಕರು ಎಷ್ಟೇ ಪ್ರಯತ್ನ ಮಾಡಿದರೂ, ಕಾರ್ಯಕರ್ತರು ತಮ್ಮ ಅಸಮಾಧಾನ ತೊರೆಯಲು ಸಿದ್ಧರಿಲ್ಲವಂತೆ. ಈ ಒಂದು ಚುನಾವಣೆಯಲ್ಲಿ ನಮ್ಮನ್ನು ನಮ್ಮ ಪಾಲಿಗೆ ಬಿಟ್ಟು ಬಿಡಿ. ಆಮೇಲೆ ನೀವು ಹೇಳಿದಂತೆ ಕೇಳುತ್ತೇವೆ ಎಂದು ಹೇಳುತ್ತಿದ್ದಾರಂತೆ.

ಮಂಡ್ಯದಲ್ಲಿ ಕಾಂಗ್ರೆಸ್‌ನವರು, ಮೈಸೂರಿನಲ್ಲಿ ಜೆಡಿಎಸ್‌ನವರು ತಮ್ಮ ನಾಯಕರ ಮುಂದೆಯೇ ಇಂತದ್ದೊಂದು ಬೇಡಿಕೆ ಇಡುತ್ತಿದ್ದಾರಂತೆ. ಇದು ಹಿರಿಯ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆಯಂತೆ. ಇತ್ತ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಳೆದುಕೊಳ್ಳುವಂತೆಯೂ ಇಲ್ಲ, ಅತ್ತ, ಅವರ ಮೇಲೆ ಕ್ರಮ ಕೈಗೊಳ್ಳದೆ ಸುಮ್ಮನಿರುವಂತೆಯೂ ಇಲ್ಲ ಎಂಬಂತಾಗಿದೆಯಂತೆ ನಾಯಕರ ಸ್ಥಿತಿ.

ಅದಕ್ಕೆ ನಾನು ಹೊಡೆದಂಗೆ ಮಾಡ್ತೇನೆ, ನೀವು ಅತ್ತಂಗೆ ಮಾಡಿ ಎಂದು ನಾಮ್‌ಕಾವಾಸ್ತೆ ಶಿಸ್ತು ಕ್ರಮ, ನೋಟಿಸ್‌ ಜಾರಿ, ಅಮಾನತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಂತೆ. ಚುನಾವಣಾ ಫ‌ಲಿತಾಂಶ ಹೊರ ಬರುತ್ತಿದ್ದಂತೆ ಈಗಿನ ಆದೇಶಗಳನ್ನು ಹಿಂದಕ್ಕೆ ಪಡೆಯುವ ಕೆಲಸವೂ ಆಗಲಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next