Advertisement
ಮಣ್ಣಿನಲ್ಲಿ ಪ್ರಾಣಿಗಳು, ಜಲಾಶಯ, ಶಿವಲಿಂಗ ಅರಳಿದರೆ, ಛದ್ಮವೇಷದಲ್ಲಿ ಬುದ್ಧ, ಸರಸ್ವತಿ, ಶ್ರೀರಾಮ, ಶಿಲಾಬಾಲಕಿ ಕಣ್ಮನ ಸೆಳೆ ದರು. ಜಾನಪದ ಕಲರವ, ಆಕರ್ಷಕ ಭರತ ನಾಟ್ಯ, ಇಂಪಾದ ಗಾಯನ ನೆರೆದಿದ್ದವ ರನ್ನು ಮಂತ್ರಮುಗ್ಧರನ್ನಾಗಿಸಿತು. ಅಶೋಕನ ಪ್ರಾಣಿಗಳ ಧ್ವನಿ ಅನುಕರಣೆಗೆ ಸಭಿಕರು ಫಿದಾ ಆದರು.
Related Articles
Advertisement
ಸಾಂಸ್ಕೃತಿಕ ಸಂಭ್ರಮ: ಮಕ್ಕಳ ಭರತನಾಟ್ಯ, ಲಘುಸಂಗೀತ, ಭಾವಗೀತೆ, ಅಭಿನಯಗೀತೆ, ಭಕ್ತಿಗೀತೆಗಳಂತೂ ಸಾಂಸ್ಕೃತಿಕ ಸಂಭ್ರಮವನ್ನು ಉಣ ಬಡಿಸಿದರೆ, ಇನ್ನು ಪಠ್ಯಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಪಠಣ, ಹಿಂದಿ, ಇಂಗ್ಲಿಷ್ ಕಂಠಪಾಠ, ಆಶುಭಾಷಣ, ನವಿರಾದ ಹಾಸ್ಯ ಸೇರಿ ಎಲ್ಲಾ ಸ್ಪರ್ಧೆಗಳು ಆಕರ್ಷಕವಾಗಿತ್ತು. ಕಟ್ಟೆಮಳಲವಾಡಿಯ ವಿಕಲಚೇತನ ಅಶೋಕ್‌ನ ವಿವಿಧ ಪ್ರಾಣಿಗಳ ಮಿಮಿಕ್ರಿ ಪ್ರದರ್ಶನ ವಂತೂ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.
ಪ್ರತಿಭೆಗಳಿಗೆ ಬೆನ್ನೆಲುಬಾಗಿರುವೆ: ಉದ್ಘಾಟನಾ ಸರಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್ .ಪಿ.ಮಂಜುನಾಥ್, ಮಕ್ಕಳು ಅದ್ಬುತ ಕಲಾ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ, ಹೆಣ್ಣು ಮಕ್ಕಳೇ ಹೆಚ್ಚಿನ ರೀತಿಯಲ್ಲಿ ಭಾಗವ ಹಿಸಿದ್ದು, ಗಂಡು ಮಕ್ಕಳು ಬೆರಳೆಣಿಕೆಯಷ್ಟಿದ್ದಾರೆ. ಮುಂದಿನ ದಿನಗಳಲ್ಲಿ ಆದ್ಯತೆ ನೀಡುವಂತೆ ಸೂಚಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಸ್ಪರ್ಧಿಗಳಿಗೆ ಸಹಕಾರ ನೀಡುವೆ ಎಂದು ಘೋಷಿಸಿದರು.
ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿ: ಬಿಇಒ ರೇವಣ್ಣ ಮಾತನಾಡಿ, ಈ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಮೊದಲ ಸ್ಥಾನ ಪಡೆದವರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗುವರೆಂದು ತಿಳಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೋವಿಂದೇಗೌಡ, ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶಾಸಕ ಮಂಜುನಾಥ್ ಅವರು ಅಪಾರವಾಗಿ ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು. ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಯ್ಯ, ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ, ಸ್ಥಾಯಿಸಮಿತಿ ಅಧ್ಯಕ್ಷೆ ಶ್ವೇತಾ, ತಾಲೂಕು ದೈಹಿಕಶಿಕ್ಷಣ ಪರಿವೀಕ್ಷಕ ಲೋಕೇಶ್, ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ರಂಗಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಮಹದೇವ್, ಎಸ್‌ಡಿಎಂಸಿ ಅಧ್ಯಕ್ಷೆ ಶೈಲಜಾ ಪ್ರಕಾಶ್ ಅನೇಕರಿದ್ದರು.