Advertisement

‘ಆತ್ಮಸಾಕ್ಷಿ  ವಂಚಿಸದೆ ವ್ಯಸನ ಮುಕ್ತರಾಗಿ’

06:40 AM Mar 03, 2019 | Team Udayavani |

ಧರ್ಮಸ್ಥಳ : ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು, ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆದುದರಿಂದ ಯಾವುದೇ ವ್ಯಸನಿಗಳು ಆತ್ಮಸಾಕ್ಷಿಗೆ ಸರಿಯಾಗಿ ಚಟಮುಕ್ತರಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಉಜಿರೆಯ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಸಲ್ಪಟ್ಟ 131ನೇ ವಿಶೇಷ ಮದ್ಯವರ್ಜನ ಶಿಬಿರದ 62 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದು, ಅತಿ ಹೆಚ್ಚು ಬೆಂಗಳೂರಿನವರಾಗಿದ್ದರು. ಎಂಜಿನಿಯರು 4, ಜಮೀನಾªರರು 10, ಸ್ವೋದ್ಯೋಗಿಗಳು 10, ಸರಕಾರಿ ನೌಕರರು 6 ಮಂದಿ ಹಾಗೂ ಇನ್ನಿತರ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು ಭಾಗವಹಿಸಿದ್ದರು. ವೇದಿಕೆ ಮೂಲಕ 1,328 ಸಮುದಾಯ ಮದ್ಯವರ್ಜನ ಶಿಬಿರ ರಾಜ್ಯಾದ್ಯಂತ ನಡೆಯುತ್ತಿದ್ದು, 1.05 ಲಕ್ಷ ಜನರಿಗೆ ವ್ಯಸನಮುಕ್ತರಾಗಿ ಬಾಳ್ವೆ ನಡೆಸಲು ಸಹಕಾರಿಯಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 161 ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲಾಗುವುದೆಂದು ವೇದಿಕೆಯ ನಿರ್ದೇಶಕ ವಿವೇಕ್‌ ವಿ. ಪಾಯಿಸ್‌ ತಿಳಿಸಿದರು. ಶಿಬಿರದಲ್ಲಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ, ಗಣೇಶ್‌ ಆಚಾರ್ಯ, ಭಾಸ್ಕರ ಎನ್‌., ಆರೋಗ್ಯ ಸಹಾಯಕ ವೆಂಕಟೇಶ್‌ ಉಪಸ್ಥಿತರಿದ್ದರು.

ಒಳ್ಳೆಯ ಕ್ಷಣಗಳಿಂದ ಬದುಕು ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ, ಕೆಟ್ಟ ಕ್ಷಣಗಳಿಂದ ಮತಿಭ್ರಮಣೆಯಾಗಿ ದಿಕ್ಕು ದೆಸೆಯಿಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕಾಗಿಯಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತದೆಯೇ ವಿನಾ ಪ್ರಮಾಣಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ.
– ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.