Advertisement

ನ್ಯಾಯಾಂಗ ಸೇವೆಗೆ ಕರ್ನಾಟಕ ವಿರೋಧ

10:19 AM Jan 02, 2020 | Team Udayavani |

ಹೊಸದಿಲ್ಲಿ: ಐಎಎಸ್‌, ಐಪಿಎಸ್‌ ಅಧಿಕಾರಿಗಳ ನೇಮಕಾತಿ ಮಾದರಿಯಲ್ಲಿ “ಅಖಿಲ ಭಾರತ ನ್ಯಾಯಾಂಗ ಸೇವೆಗಳು (ಎಐಜೆಎಸ್‌) ಎಂಬ ಹೊಸ ಸೇವಾ ವಲಯದ ಮೂಲಕ ವಿವಿಧ ರಾಜ್ಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳು ತಿರಸ್ಕರಿಸಿವೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಪ್ರಸ್ತಾವನೆ ಬಗ್ಗೆ ಎಲ್ಲ ರಾಜ್ಯ ಸರಕಾರಗಳಿಗೆ, ಹೈಕೋರ್ಟ್‌ಗಳ ಸಲಹೆ, ಅಭಿಪ್ರಾಯಗಳನ್ನು ಕೇಳಲಾಗಿತ್ತು. ರಾಜ್ಯ ಸರಕಾರಗಳ ಪೈಕಿ, ಕರ್ನಾಟಕ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಪಂಜಾಬ್‌ ರಾಜ್ಯಗಳು ಸಮ್ಮತಿ ಸೂಚಿಸಿಲ್ಲ. ಆದರೆ, ಹರ್ಯಾಣ ಮತ್ತು ಮಿಜೋರಂ ಮಾತ್ರ ಇದನ್ನು ಬೆಂಬಲಿಸಿವೆ.

ಬಿಹಾರ, ಚತ್ತೀಸ್‌ಗಢ, ಉತ್ತರಾಖಾಂಡ, ಮಣಿಪುರ ಹಾಗೂ ಒರಿಸ್ಸಾ ಸರಕಾರಗಳು ಎಐಜೆಎಸ್‌ನಲ್ಲಿ ಮೀಸಲಾತಿ ಬೇಕು ಎಂದು ಆಗ್ರಹಿಸಿವೆ. ಗುಜರಾತ್‌ ಸೇರಿದಂತೆ 13 ರಾಜ್ಯಗಳು
ಅಭಿಪ್ರಾಯ ತಿಳಿಸಿಲ್ಲ.

ಕರ್ನಾಟಕ ಹೈಕೋರ್ಟ್‌ ಸಹಿತ 11 ಹೈಕೋರ್ಟ್‌ ಗಳು ಪ್ರಸ್ತಾವನೆ ವಿರೋಧಿಸಿವೆ. 6 ಹೈಕೋರ್ಟ್‌ ಗಳು ಪ್ರಸ್ತಾವನೆಯಲ್ಲಿ ಕೆಲವು ಬದ ಲಾವಣೆ ಆಗಬೇಕೆಂದು ಹೇಳಿವೆ. ಸಿಕ್ಕಿಂ ಮತ್ತು ತ್ರಿಪುರಾ ಹೈಕೋರ್ಟ್‌ಗಳು ಪ್ರಸ್ತಾವನೆಗೆ ಬೆಂಬಲ ವ್ಯಕ್ತ ಪಡಿಸಿವೆ. ಕೋಲ್ಕತಾ ಹಾಗೂ ಗುವಾಹಟಿ ಹೈಕೋರ್ಟ್‌ ಗಳು ಸಹಿತ ಆರು ಹೈಕೋರ್ಟ್‌ಗಳು ತಮ್ಮ ಅಭಿಪ್ರಾಯಗಳನ್ನು ಇನ್ನೂ ಸಲ್ಲಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next