Advertisement
ಕರ್ನಾಟಕ ವಿಶ್ವವಿದ್ಯಾಲಯ 1973ರಿಂದ ರಾಜ್ಯಮಟ್ಟದ ಜಾನಪದ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದು, ಈವರೆಗೆ ಜನಪದದ ವಿವಿಧ ವಿಷಯಗಳ ಮೇಲೆ 42 ಸಮ್ಮೇಳನ ಮಾಡಲಾಗಿದೆ. ಇದೀಗ ಈ 43ನೇ ಸಮ್ಮೇಳನವನ್ನು “ಅಡ್ಡಹೆಸರು’ ಎಂಬ ವಿಷಯವನ್ನು ಆಧಾರ ವಾಗಿಟ್ಟುಕೊಂಡು ನಡೆಯಲಿದ್ದು, ಧಾರವಾಡದ ಜಾನಪದ ವಿದ್ವಾಂಸೆ ಡಾ|ಶಾಲಿನಿ ರಘುನಾಥ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದರು.
Related Articles
Advertisement
ಮಾ.18ರಂದು ಜರುಗುವ ಸಮ್ಮೇಳನದ ಸಮಾರೋಪದಲ್ಲಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ|ಡಿ.ಬಿ. ನಾಯಕ ಸಮಾರೋಪ ಭಾಷಣ ಮಾಡುವರು. ಸಂಸದ ಪ್ರಹ್ಲಾದ ಜೋಶಿ, ವಿಪ ಸದಸ್ಯ ಪ್ರೊ| ಎಸ್.ವಿ. ಸಂಕನೂರ, ಕೆ.ಇ. ಬೋರ್ಡ್ ಕಾಲೇಜಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕವಿವಿ ಕುಲಪತಿ ಪ್ರೊ|ಪ್ರಮೋದ ಗಾಯಿ,
ಡಾ|ಸಮ್ಮೇಳನದ ಸರ್ವಾಧ್ಯಕ್ಷೆ ಶಾಲಿನಿ ರಘುನಾಥ ಆಗಮಿಸಲಿದ್ದು, ಕವಿವಿ ಕುಲಸಚಿವ ಡಾ|ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಮಾ.17 ಮತ್ತು 18ರಂದು ಎರಡು ದಿನ ನಡೆಯುವ ನಡೆಯುವ ಗೋಷ್ಠಿಯಲ್ಲಿ ನಾಡಿನ ವಿವಿಧ ಹೆಸರಾಂತ ಪ್ರಾಧ್ಯಾಪಕರು, ವಿದ್ವಾಂಸರು ವಿಷಯ ಮಂಡಿಸಲಿದ್ದಾರೆ. ಅಂದು ಮಧ್ಯಾಹ್ನ 1:30 ಗಂಟೆಗೆ ಅಡ್ಡಹೆಸರು: ಪರಿಕಲ್ಪನೆ, ಶಾಸನೋಕ್ತ ವಿಷಯದ ಅಂಗವಾಗಿ ನಡೆಯುವ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ|ಬಿ.ಎಲ್. ನಡೋಣಿ ವಹಿಸಲಿದ್ದಾರೆ ಎಂದರು.
ಅಡ್ಡಹೆಸರಿನ ಅರ್ಥ, ಸ್ವರೂಪ ಕುರಿತು ಧಾರವಾಡದ ಡಾ|ರಾಜೇಂದ್ರ ನಾಯಕ, ಅಡ್ಡಹೆಸರಿನ ಚರಿತ್ರೆ ಮತ್ತು ರಾಚನಿಕ ಅಧ್ಯಯನ ಕುರಿತು ಹಂಪಿಯ ಡಾ|ವೀರೇಶ ಬಡಿಗೇರ, ಅಡ್ಡಹೆಸರಿನ ಬಳಕೆ ವಿಧಾನ ಕುರಿತು ಧಾರವಾಡದ ವಿ.ಎಲ್. ಪಾಟೀಲ, ಶಾಸನಗಳು ಮತ್ತು ಅಡ್ಡಹೆಸರು ಕುರಿತು ಡಾ| ಕಲವೀರ ಮನ್ವಾಚಾರಿ ಅವರು ವಿಷಯ ಮಂಡಿಸುವರು. ಡಾ|ಎಚ್.ಎಚ್. ನದಾಫ್, ಕೆ.ಬಿ.ದಂಡಗಿ ಗೋಷ್ಠಿ ನಿರ್ವಹಿಸುವರು.