Advertisement

 ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟನೆ

02:53 PM Nov 16, 2018 | |

ಬೆಳ್ತಂಗಡಿ: ರಾಜ್ಯದಲ್ಲಿರುವ ಎಲ್ಲ 5,130 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವ್ಯವಹಾರವನ್ನು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಏಕರೂಪದ ಸಾಫ್ಟ್ ವೇರ್‌ ಆಳವಡಿಸುವ ಕುರಿತು ರಾಜ್ಯ ಸಹಕಾರ ಸಚಿವರ ಜತೆ ಚರ್ಚಿಸಲಾಗಿದ್ದು, ಡಿಸೆಂಬರ್‌ ಅಂತ್ಯದೊಳಗೆ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಅವರು ಗುರುವಾರ ಇಲ್ಲಿನ ಶ್ರೀ ಗುರುನಾರಾಯಣ ಸಭಾಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರಿ ಯೂನಿಯನ್‌, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ತಾಲೂಕು ಸಹಕಾರಿ ಯೂನಿಯನ್‌, ತಾಲೂಕಿನ ಸಿ.ಎ. ಬ್ಯಾಂಕ್‌ಗಳು, ಹಾಲು ಸೊಸೈಟಿಗಳ ಸಹಯೋಗದಲ್ಲಿ ಬೆಳ್ತಂಗಡಿ ಕೃಷಿಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ನಡೆದ 65ನೇ ಅಖೀಲ ಭಾರತ ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಗಳು ಸರಕಾರದ ಎಲ್ಲ ಕಾರ್ಯ ಮಾಡಿದರೂ ತಮ್ಮ ಉಳಿತಾಯವನ್ನು ಸಹಕಾರ ಸಂಘಗಳಲ್ಲಿ ತೆರೆಯುವುದಿಲ್ಲ. ನಾವು ಗ್ರಾ.ಪಂ.ನ ಕಸ ಸಂಗ್ರಹಕ್ಕೆ ವಾಹನ ಕೊಡುಗೆಯಾಗಿ ನೀಡಿದರೂ ಯಾವುದೇ ಗ್ರಾ.ಪಂ. ಗಳು ನಮ್ಮಲ್ಲಿ ಖಾತೆ ತೆರೆದಿಲ್ಲ. ಸಹಕಾರಿ ಕ್ಷೇತ್ರದ ಹಣದಲ್ಲಿ ಯಾವುದೇ ತೊಂದರೆಯಾದರೂ ಡಿಸಿಸಿ ಬ್ಯಾಂಕ್‌ ಜವಾಬ್ದಾರಿ ತೆಗೆದುಕೊಳ್ಳುತ್ತದೆ ಎಂದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಬಿ. ನಿರಂಜನ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಸಹಕಾರಿಗಳ ವತಿಯಿಂದ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿಲ್ಲಾ ಸಹಕಾರಿ ಉಪನಿಬಂಧಕ ಬಿ.ಕೆ. ಸಲೀಂ, ಜಿಲ್ಲಾ ಸಹಕಾರಿ ಯೂನಿಯನ್‌ನ ಉಪಾಧ್ಯಕ್ಷ ಇ. ಸುಂದರ ಗೌಡ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಅರ್ಕಜೆ, ಉಪವ್ಯವಸ್ಥಾಪಕ ರಾಮಕೃಷ್ಣ ಭಟ್‌, ಬೆಳ್ತಂಗಡಿ ಪ್ರಾ. ಸ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್‌, ಜಿಲ್ಲಾ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುಕನ್ಯಾ ತಾ| ಸಹಕಾರಿ ಯೂನಿಯನ್‌ ಅಧ್ಯಕ್ಷ ಪುಷ್ಪರಾಜ್‌ ಹೆಗ್ಡೆ, ಜಿಲ್ಲಾ ಸಹಕಾರಿ ಯೂನಿಯನ್‌ ಸಿಇಒ ಪುರುಷೋತ್ತಮ್‌ ಹಾಗೂ ತಾಲೂಕು ಸಿಎ ಬ್ಯಾಂಕ್‌ ಅಧ್ಯಕ್ಷರು ಉಪಸ್ಥಿತರಿದ್ದರು. ಬೆಳ್ತಂಗಡಿ ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಮುನಿರಾಜ ಅಜ್ರಿ ಸ್ವಾಗತಿಸಿ, ತಾ| ಸಹಕಾರಿ ಯೂನಿಯನ್‌ನ ನಾರಾಯಣ ಫಡ್ಕೆ ವಂದಿಸಿದರು. ಆರಂಭದಲ್ಲಿ ಇಲ್ಲಿನ ಸಿ.ಎ.ಬ್ಯಾಂಕ್‌ನಿಂದ ಸಭಾಂಗಣದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು.

Advertisement

ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಮಹತ್ವ
ರಾಜ್ಯದ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಕೇವಲ 1,500 ಸಂಘಗಳು ಕಂಪ್ಯೂಟರೀಕೃತಗೊಂಡಿದ್ದು, ಉಳಿದವುಗಳು ಇನ್ನೂ ಪುಸ್ತಕದಲ್ಲಿ ವ್ಯವಹಾರ ಮಾಡುತ್ತಿವೆ. ಅವುಗಳು ಸಾಫ್ಟ್‌ವೇರ್‌ ಅಳವಡಿಕೆಗೆ ಹಿಂದೇಟು ಹಾಕುತ್ತಿವೆ. ಇಡೀ ದೇಶದಲ್ಲೇ ನಮ್ಮ ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ವಿಶೇಷ ಮಹತ್ವವಿದೆ.
– ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next