Advertisement
ನಗರದ ತೋವಿವಿಯ ಪ್ರೇಕ್ಷಾಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18ರಂದು ಬೆಳಗ್ಗೆ 10.30ಕ್ಕೆ ಜರುಗುವ ಕಾರ್ಯಕ್ರಮವನ್ನು ಭಾರತೀಯ ಅನುಸಂಧಾನ ಕೃಷಿ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ|ಆರ್ .ಸಿ.ಅಗರವಾಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ತೋಟಗಾರಿಕೆ ಸಚಿವ ಎನ್. ಮುನಿರತ್ನ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಶಾಸಕ ವೀರಣ್ಣ ಚರಂತಿಮಠ ಭಾಗವಹಿಸಲಿದ್ದಾರೆ ಎಂದರು.
Related Articles
Advertisement
ಹ್ಯಾಕ್‌ಥಾನ್ ಸಹ ಆಯೋಜಿಸಿದ್ದು, ಮೂರು ವಿಭಿನ್ನ ವಿಷಯಗಳ ಅಡಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ ಹೆಚ್ಚಿಸುವ ತಂತ್ರಗಳು ಮತ್ತು ವಿಧಾನಗಳು, ಕ್ರಾಪ್ ಮಾಡೆಲಿಂಗ್ ಮತ್ತು ಮಾರುಕಟ್ಟೆ ಮುನ್ಸೂಚನೆ ಥೀಮ್-3ರಲ್ಲಿ ಎ1 ತಂತ್ರಜ್ಞಾನಗಳ ಅಪ್ಲಿಕೇಶನ್, ವರ್ಧಿತ ಬೆಳೆ ಬೆಳವಣಿಗೆಗೆ ಸಸ್ಯ ಆಧಾರಿತ ಉತ್ಪನ್ನಗಳ ಅಭಿವೃದ್ಧಿ, ಫಾರ್ಮ್ ಟು ಪೋರ್ಕ್ ವಿಷಯಗಳಡಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಪ್ರಥಮ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ., ತೃತೀಯ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದರು.
ತೋವಿವಿಯ ಪ್ರಧಾನ ಸಂಶೋಧಕ ಡಾ|ಆರ್. ಕೆ. ಮೇಸ್ತಾ ಮಾತನಾಡಿ, ಈ ಸಮಾವೇಶದ ಉದ್ದೇಶ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ರಾಜ್ಯ ಸರಕಾರದಿಂದ ಶೇ.20 ಅನುದಾನದ ಸಹಕಾರ ದೊರೆಯಲಿದೆ. ಅಮೆರಿಕ, ಪೋಲಂಡ್ ಸೇರಿದಂತೆ ಇತರೆ ದೇಶದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ಬೋಧಕರಿಗೂ ಸಹ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ರಿಜಿಸ್ಟರ್ ಡಾ|ಟಿ.ಬಿ. ಅಲ್ಲೋಳ್ಳಿ, ಸಹ ಪ್ರಧಾನ ಸಂಶೋಧಕ ಡಾ|ಐ.ಬಿ.ಬಿರಾದಾರ, ಡಾ|ವೆಂಕಟೇಶಲು, ಸಂವಹಣಾ ಕೇಂದ್ರದ ಡಾ|ಎಸ್. ಶಶಿಕುಮಾರ, ತೋವಿವಿಯ ಉಪಹಣಕಾಸು ನಿಯಂತ್ರಣಾಧಿಕಾರಿ ಡಾ| ಡಿ.ಎಲ್.ಸುತಗಟ್ಟಿ, ಡಾ|ಐ.ಬಿ. ಬಿರಾದಾರ ಉಪಸ್ಥಿತರಿದ್ದರು.