ಹಾವೇರಿ: ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾದ ‘ಈಜಿಹಂಟ್’ ಎನ್ನುವ ಹೊಸ ಆ್ಯಪ್‌ನ್ನು ಬೆಂಗಳೂರು ಮೂಲದ ಸಾಫ್ಟ್ ಟೆಕ್ ಎಂಬ ಸಂಸ್ಥೆ ತಯಾರಿಸಿದೆ ಎಂದು ಸಂಸ್ಥೆಯ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದರು.
ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮತ್ತು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹಾಗೂ ಸೇವಾನಿರತ ವ್ಯಕ್ತಿಗಳ ನಡುವೆ ಸಂಪರ್ಕ ಸೇತುವೆಯಾಗಿ ಈಜಿಹಂಟ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಎಲ್ಲ ರೀತಿಯ ವ್ಯಾಪಾರಸ್ಥರಿಗೆ ಮತ್ತು ಕರಕುಶ ಕಸುಬುದಾರರಿಗೆ ಈಜಿಹಂಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಚಾರ ದೊರಕಿಸಲಾಗುತ್ತಿದೆ. ಸಾರ್ವಜನಿಕರು ಅವರವರ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇಕಾದ ವ್ಯಾಪಾರಸ್ಥರ ಮತ್ತು ಕರಕುಶಲ ಕಸುಬುದಾರರ ಅಗತ್ಯ ಮಾಹಿತಿಯನ್ನು ಬೆರಳತುದಿಯಲ್ಲೇ ಸಿಗುವಂತೆ ಈ ಆ್ಯಪ್‌ನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ಈಜಿಹಂಟ್ ಆ್ಯಪ್ ಮೂಲಕ ರೈತರು ಬೆಳೆಯುವ ಬೆಳೆಗಳ ಬಗ್ಗೆ ಮಾರುಕಟ್ಟೆ ವಹಿವಾಟುಗಳ ಬಗ್ಗೆ, ಸರ್ಕಾರದ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ಸರ್ಕಾರಿ ಯೋಜನೆಗಳು, ಆಯಾ ಇಲಾಖೆಯ ಅಧಿಕಾರಿಗಳ ಮಾಹಿತಿ ನಂಬರ್ ಸಹಿತ ಆ್ಯಪ್‌ನಲ್ಲಿ ಸಿಗಲಿದೆ. ಒಟ್ಟಾರೆ ಆ್ಯಪ್ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಸಮಗ್ರ ಮಾಹಿತಿಯ ಕಣಜವನ್ನು ಹೊಂದಿದೆ ಎಂದು ತಿಳಿಸಿದರು.
ತುರ್ತು ಅಗತ್ಯ ಸೇವೆಗಳಾದ ರಕ್ತದಾನಿಗಳು, ಆಂಬ್ಯುಲೆನ್ಸ್, ಬ್ಲಿಡ್‌ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಸರ್ಕಾರಿ ಆಸ್ಪತ್ರೆ ಪೊಲೀಸ್ ಠಾಣೆ, ಅಗ್ನಿಶಾಮಕದಳ ಠಾಣೆ ಸೇರಿದಂತೆ ಇತರ ಇಲಾಖೆಗಳ ಮಾಹಿತಿ ಈ ಆ್ಯಪ್‌ನಲ್ಲಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯು ಸಹ ತನ್ನ ವೃತ್ತಿ ಅಥವಾ ವ್ಯಾಪಾರ ವಹಿವಾಟನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ಸಹಾಕಾರ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈಜಿಹಂಟ್ ಆ್ಯಪ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಂಕಟೇಶ ವೆಲ್ಕುರು ಮೊ.9886861146, ಮಂಜನಾಥ ಮತ್ತಿಹಳ್ಳಿ 7975252506 ಸಂಪರ್ಕಿಸಬಹುದು ಎಂದರು.
ಈಜಿಹಂಟ್‌ನ ಭೋಜರಾಜ, ವೆಂಕಟೇಶ ವೆಲ್ಕುರು, ಮಂಜನಾಥ ಮತ್ತಿಹಳ್ಳಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.