Advertisement

ಒಂದೇ ಸ್ಥಳದಲ್ಲಿ ಎಲ್ಲ ಸರ್ಕಾರಿ ಕಚೇರಿ

10:04 AM Mar 18, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜನರಿಗೆ ಸರ್ಕಾರಿ ಕೆಲಸ ಕಾರ್ಯಗಳಿಗೆಅನುಕೂಲ ಕಲ್ಪಿಸಲು ಒಂದೇ ಸ್ಥಳದಲ್ಲಿ ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳನ್ನುನಿರ್ಮಿಸಲು ದೃಢಸಂಕಲ್ಪ ಮಾಡಲಾಗಿದೆ ಎಂದು ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ತಿಳಿಸಿದರು.

Advertisement

2018-19ನೇ ಸಾಲಿನ ಗ್ರಾಮೀಣಾಭಿವೃದ್ರಧಧಿ ಮತ್ತು ಪಂಚಾಯತ್‌ ಇಲಾಖೆ ಅನುದಾನದಲ್ಲಿಬುಧವಾರ 50 ಲಕ್ಷ ರೂ. ವೆಚ್ಚದಲ್ಲಿ ನೂತನ ತಾಪಂ ಭವನವನ್ನು ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಹಳೇ ತಾಪಂ ಕಟ್ಟಡ ಶಿಥಿಲಾವ್ಯವಸ್ಥೆ ಸೇರಿರುವುದರಿಂದ 50 ಲಕ್ಷ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಯಿತು ಎಂದರು.

ಮಿನಿ ವಿಧಾನಸೌಧ ನಿರ್ಮಾಣ: 50 ಲಕ್ಷ ರೂ.ಗಳ ಅನುದಾನ ಉಪಯೋಗಿಸಿಕೊಂಡು ಕಟ್ಟಡ ನಿರ್ಮಾಣ ಮಾಡದಿದ್ದರೆ ಹಣ ಸಕಾìರಕ್ಕೆ ವಾಪಸ್‌ ಹೋಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಟ್ಟಡಗಳು ಒಂದೇ ಸ್ಥಳದಲ್ಲೇ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗ ಕೃಷಿ, ನೋಂದಣಿ, ರೇಷ್ಮೆ, ತೋಟಗಾರಿಕೆ ಮತ್ತಿತರಇಲಾಖೆಗಳ ಕಚೇರಿಗಳು ದೂರದ ಸ್ಥಳಗಳಲ್ಲಿ ಇರುವುದರಿಂದ ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ತೊಂದರೆಯಾಗಿದೆ. ಈ ಉದ್ದೇಶದಿಂದ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದರು.

ತುರ್ತಾಗಿ ಕಟ್ಟಡ ನಿರ್ಮಾಣ: ತಾಲೂಕಿನ ದೂರದ ಸ್ಥಳಗಳಿಂದ ಹಳ್ಳಿಗಳ ಜನರು ವಿವಿಧ ಕೆಲಸಗಳನ್ನು ಮಾಡಿಕೊಳ್ಳಲು ಬಾಗೇಪಲ್ಲಿ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಆದರೆ ಗ್ರಾಮಸ್ಥರಿಗೆಅನೇಕ ಇಲಾಖೆಗಳ ಕಚೇರಿಗಳು ದೂರದ ಸ್ಥಳಗಳಲ್ಲಿ ಇರುವುದರಿಂದ ತೊಂದರೆಯಾಗಿದೆ. ಈ ಹಿಂದೆ ತಾಪಂ ಕಟ್ಟಡ ಶಿಥಿಲಾವಸ್ಥೆಗೆ ಸೇರಿತ್ತು. ಇದರಿಂದ ನೌಕರರು ಕರ್ತವ್ಯ ನಿರ್ವಹಿಸಲುಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ತುರ್ತಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಎಸ್‌.ಎನ್‌.  ಸುಬ್ಟಾರೆಡ್ಡಿ ಅವರಿಗೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಶಾಲು ಹೊದಿಸಿ ಸನ್ಮಾನಿಸಿದರು. ತಹಶೀಲ್ದಾರ್‌ ದಿವಾಕರ್‌, ಪುರಸಭೆ ಅಧ್ಯಕ್ಷೆ ಗುಲ್ನಾಜ್ ಬೇಗಂ, ತಾಪಂ ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್‌, ಇಒಎಚ್‌.ಎನ್‌.ಮಂಜುನಾಥಸ್ವಾಮಿ, ಸದಸ್ಯರಾದ ಕೆ.ಆರ್‌.ಸುಧಾಕರರೆಡ್ಡಿ, ರಾಮಕೃಷ್ಣಾರೆಡ್ಡಿ,ಶ್ರೀರಾಮನಾಯ್ಕ, ಸುಧಾಕರ್‌, ರೆಡ್ಡಪ್ಪ, ಕೆ.ಕೆ. ವೆಂಕಟೇಶ್‌, ಈಶ್ವರಮ್ಮ, ಪ್ರಮೀಳಮ್ಮ, ಕೆಡಿಪಿಸದಸ್ಯ ಅಮರನಾಥರೆಡ್ಡಿ, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ, ಎ.ಡಿ.ನಾರಾಯಣಪ್ಪ, ತಾಲೂಕು ಸಾಕ್ಷರತಾ ಸಮನ್ವಯ ಅಧಿಕಾರಿ ಎನ್‌.ಶಿವಪ್ಪ ಉಪಸ್ಥಿತರಿದ್ದರು.

Advertisement

ಶಾಸಕರ ಪರಿಶ್ರಮದಿಂದ ನೂತನ ತಾಪಂ ಕಟ್ಟಡ ತ್ವರಿತಗತಿಯಲ್ಲಿ ನಿರ್ಮಾಣವಾಗಿದೆ. ಹಳೇ ತಾಪಂ ಕಟ್ಟಡಶಿಥಿಲಾವಸ್ಥೆ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ತಕ್ಷಣ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ ರಾಜ್ಯ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿದ್ದರಫಲವಾಗಿ ನೂತನ ಕಟ್ಟಡ ನಿರ್ಮಾಣವಾಗಿದೆ. ಕೆ.ಆರ್‌.ನರೇಂದ್ರಬಾಬು, ತಾಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next