Advertisement

ಎಲ್ಲ ಕೃಷಿಕರ ಸಹಭಾಗಿತ್ವ ಅಗತ್ಯ: ಡಿಸಿ

12:46 AM Jul 10, 2019 | sudhir |

ಕಾಸರಗೋಡು: ಕೃಷಿ ಬೆಳೆಗಳಿಗೆ ಪೂರ್ಣರೂಪದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಜಾರಿಗೊಳಿಸುವ ಬೆಳೆ ವಿಮೆ ಯೋಜನೆಯಲ್ಲಿ ಜಿಲ್ಲೆಯ ಎಲ್ಲ ಕೃಷಿಕರ ಸಂಪೂರ್ಣ ಸಹಭಾಗಿತ್ವ ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಆಗ್ರಹಿಸಿದರು.

Advertisement

ಬೆಳೆ ವಿಮೆ ಪಕ್ಷಾಚರಣೆ ಅಂಗವಾಗಿ ಆತ್ಮ ಸಂಘಟನೆಯ ತರಬೇತಿ ಕೇಂದ್ರದಲ್ಲಿ ನಡೆದ ಬ್ಲಾಕ್‌ ಮಟ್ಟದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆಂಗು, ಅಡಿಕೆ, ಬಾಳೆ, ಕರಿಮೆಣಸು, ಭತ್ತ ಎಂಬ 5 ಬೆಳೆಗಳಿಗೆ ಸಂಬಂಧಿಸಿ ಶೇ.100 ಕೃಷಿಕರನ್ನು ಬೆಳೆ ವಿಮೆಗೆ ಸೇರ್ಪಡೆಗೊಳಿಸಬೇಕು. ಜು.25ರ ಮುಂಚಿತವಾಗಿ ಗುರಿ ಸಾಧಿಸಬೇಕೆಂದು ಅವರು ತಿಳಿಸಿದರು.

ಪ್ರೀಮಿಯಂ ಬಹಳ ಕಡಿಮೆಯಿರುವ ಈ ಯೋಜನೆಯ ಕುರಿತು ಕೃಷಿಕರಲ್ಲಿ ಜಾಗೃತಿ ಮೂಡಿಸಿ, ಅರ್ಜಿ ಫಾರಂ ಭರ್ತಿಗೊಳಿಸಲು ಅವರಿಗೆ ಸಹಾಯ ಮಾಡಬೇಕು. ಯಾವ ಕಾರಣಕ್ಕೂ ಸರಕಾರದ ಸೌಲಭ್ಯಗಳು ಅನರ್ಹರ ಕೈಗೆ ಸಿಗದಂತೆ ಖಚಿತಪಡಿಸಿಕೊಂಡು ಅರ್ಹ ಕೃಷಿಕನಿಗೆ ಸೂಕ್ತ ಅವಧಿಯಲ್ಲಿ ಸೌಲಭ್ಯ ಸಿಗುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ. ಪ್ರಕೃತಿ ವಿಕೋಪ ಮೂಲಕ ಸಂಭವಿಸಬಹುದಾದ ಕೃಷಿ ನಾಶಕ್ಕೆ ನಷ್ಟ ಪರಿಹಾರವೂ ಈ ಯೋಜನೆ ಮೂಲಕ ಲಭಿಸಲಿದೆ ಎಂಬುದು ಗಮನಾರ್ಹ ವಿಚಾರ ಎಂದು ಸಭೆ ಅಭಿಪ್ರಾಯಪಟ್ಟಿದೆ.

ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್‌ ಮತ್ತಾಯಿ, ಕೃಷಿ ಡೆಪ್ಯುಟಿ ಡೈರೆಕ್ಟರ್‌ ಎಸ್‌. ಸುಷ್ಮಾ, ಸಹಾಯಕ ಡೈರೆಕ್ಟರ್‌ ಕೆ. ಆನಂದನ್‌ ಹಾಗೂ ಕಾಸರಗೋಡು ಬ್ಲಾಕ್‌ ವ್ಯಾಪ್ತಿಯ 6 ಕೃಷಿ ಭವನಗಳ ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next