Advertisement

ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಮೊಮೊಟ, ಯೂಫಿ

12:30 AM Mar 12, 2019 | |

ಲಂಡನ್‌: ಚೀನದ ಚೆನ್‌ ಯೂಫಿ ಮತ್ತು ಜಪಾನ್‌ನ ಕೆಂಟೊ ಮೊಮೊಟ ಮೊದಲ ಬಾರಿಗೆ “ಆಲ್‌ ಇಂಗ್ಲೆಂಡ್‌ ಓಪನ್‌’ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ.

Advertisement

ಪುರುಷರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ಸ್ಪರ್ಧಿಸಿದ ಜಪಾನಿನ ಎಡಗೈ ಆಟಗಾರ ಕೆಂಟೊ ಮೊಮೊಟ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸನ್‌ ಅವರನ್ನು 21-11, 15-21, 21-15 ಗೇಮ್‌ಗಳಿಂದ ಸೋಲಿಸಿದರು. ಈ ಪಂದ್ಯ ಒಂದು ಗಂಟೆ, 21 ನಿಮಿಷಗಳ ವರೆಗೆ ಸಾಗಿತು. ಈ ಮೂಲಕ ಇಲ್ಲಿ ಪ್ರಶಸ್ತಿ ಗೆದ್ದ ಮೊದಲ ಜಪಾನ್‌ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಪಾನಿ ಆಟಗಾರರು ಇಲ್ಲಿ 1963ರಿಂದಲೂ ಸ್ಪರ್ಧಿಸುತ್ತಲೇ ಬಂದಿದ್ದರೂ ಪ್ರಶಸ್ತಿ ಮಾತ್ರ ಒಲಿದಿರಲಿಲ್ಲ. ಮೊಮೊಟ ಈ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಸೆಣಸಿದ್ದು ಇದೇ ಮೊದಲು.

ಹಾಲಿ ಚಾಂಪಿಯನ್‌ ಪರಾಭವ
ವನಿತೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಚೆನ್‌ ಯೂಫಿ, ಹಾಲಿ ಚಾಂಪಿಯನ್‌ ಥಾಯ್ಲೆಂಡ್‌ನ‌ ತೈ ತ್ಸು ಯಿಂಗ್‌ ಅವರ ವಿರುದ್ಧ 21-17, 21-17 ಗೇಮ್‌ಗಳಿಂದ ಜಯಿಸಿ ಮೊದಲ ಸಲ “ಆಲ್‌ ಇಂಗ್ಲೆಂಡ್‌ ಓಪನ್‌’ ಪ್ರಶಸ್ತಿಗೆ ಮುತ್ತಿಕ್ಕಿದರು. ಈ ಪಂದ್ಯ ಕೇವಲ 41 ನಿಮಿಷಗಳಲ್ಲಿ ಕೊನೆಗೊಂಡಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಂಡೋನೇಶ್ಯದ ಮೊಹ್ಮಮ್‌ ಅಹ್ಸಾನ್‌-ಹೆಂಡ್ರಾ ಸೆಟಿವಾನ್‌ ಜೋಡಿ ಮಲೇಶ್ಯದ ಆರನ್‌ ಚಿಯ-ಸೊಹ್‌ ವಿಕ್‌ ಜೋಡಿಯನ್ನು 11-21, 21-14, 21-12 ಗೇಮ್‌ಗಳಿಂದ ಸೋಲಿಸಿದರು.

ವನಿತಾ ಡಬಲ್ಸ್‌ ವಿಭಾಗದಲ್ಲಿ ಚೀನದ ಚಿನ್‌ ಕಿಂಗ್‌ಚಿನ್‌-ಜಿಯಾ ಯೂಫಾನ್‌ ಜಪಾನಿನ ಮಾಯು ಮತ್ಸುಮೊಟೊ-ವಕಾನಾ ನಗಾಹಾರ ವಿರುದ್ಧ 18-21, 22-20, 21-11 ಗೇಮ್‌ಗಳಿಂದ ಜಯಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next