Advertisement
ರವಿವಾರ ರಾತ್ರಿಯ ಪ್ರಶಸ್ತಿ ಕಾಳಗದಲ್ಲಿ ಅವರು ವಿಶ್ವದ ನಂ.1 ಆಟಗಾರ, ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಪರಾಭವಗೊಂಡರು. ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಕೂಡ ಆಗಿರುವ ಅಕ್ಸೆಲ್ಸೆನ್ 21-10, 21-15 ಅಂತರದಿಂದ ಭಾರತೀಯನಿಗೆ ಸೋಲುಣಿಸಿದರು.
Related Articles
ಈ ಕೂಟದ ವನಿತಾ ಸಿಂಗಲ್ಸ್ ಪ್ರಶಸ್ತಿ ಜಪಾನಿನ ಅಕಾನೆ ಯಮಾಗುಚಿ ಪಾಲಾಯಿತು. ನೇರ ಗೇಮ್‌ಗಳ ಫೈನಲ್ ಹೋರಾಟದಲ್ಲಿ ಅವರು ಕೊರಿಯಾದ ಅನ್ ಸೆ ಯಂಗ್ ವಿರುದ್ಧ 21-15, 21-15 ಅಂತರದಿಂದ ಗೆದ್ದು ಬಂದರು. ಪಂದ್ಯದುದ್ದಕ್ಕೂ ಪ್ರಭುತ್ವ ಸಾಧಿಸುತ್ತ ಹೋದ ಯಮಾಗುಚಿ ಬಹಳ ಸುಲಭದಲ್ಲಿ ಗೆಲುವು ಒಲಿಸಿಕೊಂಡರು.
Advertisement
ಭಾರತದ ಜೋಡಿ ಪರಾಭವವನಿತಾ ಡಬಲ್ಸ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್ ಜೋಡಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತು. ಚೀನದ ಶು ಕ್ಸಿಯಾನ್ ಜಾಂಗ್-ಯು ಜೆಂಗ್ 21-17, 21-16 ನೇರ ಗೇಮ್‌ಗಳಿಂದ ಭಾರತದ ಜೋಡಿಯನ್ನು ಹಿಮ್ಮೆಟ್ಟಿಸಿದರು.