Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ಭಾರತದ ಎರಡು ದಶಕಗಳ ಪ್ರಶಸ್ತಿ ಬರ ನೀಗೀತೇ?

11:29 PM Mar 15, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಬರೋಬ್ಬರಿ 21 ವರ್ಷಗಳ ಪ್ರಶಸ್ತಿ ಬರ ನೀಗುವ ನಿರೀಕ್ಷೆಯೊಂದಿಗೆ ಭಾರತದ ಬ್ಯಾಡ್ಮಿಂಟನ್‌ಪಟುಗಳು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಕಣಕ್ಕಿಳಿಯಲಿದ್ದಾರೆ.

Advertisement

ಬುಧವಾರ ಇಲ್ಲಿ ಆರಂಭವಾಗುವ ಕೂಟದಲ್ಲಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ.ಸಿಂಧು, ಕೆ. ಶ್ರೀಕಾಂತ್‌, ಯುವ ಆಟಗಾರ ಲಕ್ಷ್ಯ ಸೇನ್‌ ಮತ್ತು ಸೈನಾ ಅವರು ಭಾರತದ ಭರವಸೆಗಳಾಗಿದ್ದಾರೆ.

ಭಾರತದ ಪ್ರಕಾಶ್‌ ಪಡುಕೋಣೆ (1980) ಮತ್ತು ಪುಲ್ಲೇಲ ಗೋಪಿಚಂದ್‌ (2001) ಅವರಷ್ಟೇ ಇದುವರೆಗೆ ಈ ಪ್ರತಿಷ್ಠಿತ ಕೂಟದಲ್ಲಿ ಚಾಂಪಿಯನ್‌ ಆಗಿದ್ದರು.

ವನಿತಾ ಸಿಂಗಲ್ಸ್‌
ಮಹಿಳಾ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸಿಂಧು ಅವರಿಗೆ ಚೀನದ ವಾಂಗ್‌ ಝಿ ಯಿ ಸವಾಲು ಎದುರಾಗಿದೆ. ಸೈನಾ ಥಾಯ್ಲೆಂಡ್‌ ಆಟಗಾರ್ತಿ ಪಾರ್ನ್ಪವಿ ಚೊಚುವಾಂಗ್‌ ವಿರುದ್ಧ ಸೆಣೆಸಲಿದ್ದಾರೆ.

ಲಕ್ಷ್ಯ-ಸೌರಭ್‌ ಮುಖಾಮುಖಿ
ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್‌ ಅವರು ಭಾರತದವರೇ ಆದ ಸೌರಭ್‌ ವರ್ಮ ಎದುರು ಆಡಬೇಕಾಗಿ ಬಂದಿದೆ. ಉತ್ತಮ ಲಯದಲ್ಲಿರುವ ಶ್ರೀಕಾಂತ್‌ ಥಾಯ್ಲೆಂಡ್‌ನ‌ ಕಾಂತಫೋನ್‌ ವಿರುದ್ಧ ಸ್ಪರ್ಧೆಗೆ ಇಳಿಯುವರು. ಬಿ. ಸಾಯಿ ಪ್ರಣೀತ್‌, ವಿಕ್ಟರ್‌ ಅಕ್ಸೆಲ್ಸೆನ್‌ ಅವರ ಕಠಿನ ಸವಾಲು ಎದುರಿಸಬೇಕಿದೆ.

Advertisement

ಉಳಿದಂತೆ ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ, ಧ್ರುವ್‌ ಕಪಿಲ-ಎಂ.ಆರ್‌.ಅರ್ಜುನ್‌, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next