Advertisement

ವಿಶ್ವವಿದ್ಯಾಲಯ ಸ್ಥಾಪನೆಯಿಂದ ಎಲ್ಲ ಅಭಿವೃದ್ಧಿ ಅಸಾಧ್ಯ : ಯತ್ನಾಳ

09:14 PM Sep 06, 2022 | Team Udayavani |

ವಿಜಯಪುರ: ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗುವುದು ಸೂಕ್ತವಲ್ಲ. ವಿಶ್ವವಿದ್ಯಾಲಯ ಸ್ಥಾಪನೆಯಿಂದ ಎಲ್ಲವೂ ಅಭಿವೃದ್ಧಿಯಾಗಿ, ಸುಧಾರಣೆ ಕಾಣಲು ಸಾದ್ಯವಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಜಯಪುರದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಆರಂಭಕ್ಕೆ ನಿಮ್ಮ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ ಮಹಿಳಾ ವಿಶ್ವವಿದ್ಯಾಲಯವಿದ್ದು, ಮತ್ತೊಂದು ವಿಶ್ವವಿದ್ಯಾಲಯ ಅವಶ್ಯವಿಲ್ಲ ಎಂದರು.

ವಿಧಾನಸಭೆಯ ಭರವಸೆ ಸಮಿತಿ ಸದಸ್ಯನಾಗಿರುವ ನನಗೆ ಎಲ್ಲ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ ಏನಿದೆ ಎಂಬುದರ ಅರಿವಿದೆ. ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದ್ಕಕಾಗಿ ಕೋಟ್ಯಂತರ ರೂ. ಅನುದಾನ, ನೂರಾರು ಎಕರೆ ಜಮೀನು, ಕುಲಪತಿ, ಪ್ರಾಧ್ಯಾಪಕರು ಅಂತೆಲ್ಲ ಆರ್ಥಿಕ ಹೊರೆಯೇ ಹೆಚ್ಚಿಸಲಿದೆಯೇ ಹೊರತು, ಅಭಿವೃದ್ಧಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂದರು.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ: 55.39 ಲ.ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next