Advertisement

ಒಂದೇ ಆ್ಯಪ್‌ನಲ್ಲಿ ಎಲ್ಲ ಇಲಾಖೆ ದೂರು

11:10 AM Feb 09, 2020 | Suhan S |

ಬೆಂಗಳೂರು: ರಾಜಧಾನಿ ಅಭಿವೃದ್ಧಿಗೆ ಸರ್ಕಾರ ಬದ್ಧ ವಾಗಿದ್ದು, ದೂರ ದೃಷ್ಟಿಯುಳ್ಳ ಯೋಜನೆ ರೂಪಿಸಿ ಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ, ಆರೋಗ್ಯ ಇಲಾಖೆ ಹಾಗೂ ಐಟಿ ಇಲಾಖೆಯಿಂದ ವಿಧಾನಸೌಧ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಸಹಾಯ 2.0 ಮತ್ತು ನಮ್ಮ ಬೆಂಗಳೂರು ಅಪ್ಲಿಕೇಷನ್‌, ಪಿ.ಒ.ಎಸ್‌ ದಂಡ ವಿಧಿಸುವ ಯಂತ್ರ, ಆ್ಯಂಬುಲೆನ್ಸ್‌ ವಾಹನ ಹಾಗೂ ಯಾಂತ್ರಿಕ ಕಸ ಗುಡಿಸುವ ವಾಹನಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು.

ನಗರದ ಸಾರ್ವಜನಿಕರ ದೂರುಗಳನ್ನು ಶೀಘ್ರ ಬಗೆಹರಿ ಸುವುದು, ತುರ್ತು ಸಂದರ್ಭಗಳಲ್ಲಿ ನೆರವಾಗಲು ಆ್ಯಂಬುಲೆನ್ಸ್‌ ಸೇವೆ ಪರಿಚಯಿಸಲಾಗುತ್ತಿದೆ. ನಮ್ಮ ಬೆಂಗಳೂರು ಅಪ್ಲಿಕೇಷನ್‌ನ ಮೂಲಕ ಹಲವು ಇಲಾಖೆ ಗಳಿಗೆ ದೂರು ಸಲ್ಲಿಸಬಹುದಾಗಿದೆ. ದೂರುಗಳು ನಿರ್ದಿಷ್ಟ ಸಮಯದಲ್ಲಿ ಪರಿಹಾರವಾಗಲಿದೆ ಎಂದು ಹೇಳಿದರು.

ಸಹಾಯ 2.0 ಆ್ಯಪ್‌: ಬೆಂಗಳೂರು ನಗರದ ನಾಗರಿಕರು ತಮ್ಮ ಕುಂದು ಕೊರತೆಗಳನ್ನು ದಾಖಲಿಸಲು ಹಾಗೂ ಪರಿಹರಿಸಲು ಸಹಾಯ ಎನ್ನುವ ತಂತ್ರಾಂಶವನ್ನು ಪರಿಚಯಿಸಲಾಗಿದೆ. ಇದನ್ನು ಸದ್ಯ ಮತ್ತಷ್ಟು ಉತ್ಕೃಷ್ಟಗೊಳಿಸಲಾಗಿದೆ. “ಸಹಾಯ 2.0′ ತಂತ್ರಾಂಶವನ್ನು ಅಭಿವೃದ್ದಿಪಡಿಸಿ ಬಿಡುಗಡೆಗೊಳಿಸಲಾಗುತ್ತಿದೆ. ಸಹಾಯ 2.0 ತಂತ್ರಾಂಶದ ಮೂಲಕ ವಿವಿಧ ಮಾದರಿಯ ದೂರುಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೇರವಾಗಿ ತಲುಪಲಿದೆ. ಪಾಲಿಕೆಯ ಅಧಿಕಾರಿಗಳು ನೋಂದಾಯಿತ ದೂರುಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಅನಕೂಲವಾಗುವಂತೆ ಈ ತಂತ್ರಾಂಶದಲ್ಲಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರಿಂದ ದೂರು ದಾಖಲಾದ ತಕ್ಷಣದಿಂದಲೇ ಅಧಿಕಾರಿಗಳು ದೂರಿನ ವಿವರವನ್ನು ತಮ್ಮ ಮೊಬೈಲ್‌ನಲ್ಲಿ ನೋಡಬಹುದಾಗಿದೆ ಹಾಗೂ ದೂರನ್ನು ಪರಿಹಾರವಾದ ತಕ್ಷಣವೇ ಛಾಯಚಿತ್ರ ಸಾರ್ವಜನಿಕರಿಗೆ ತಲುಪಲಿದೆ.

ಅಲ್ಲದೆ, ಈ ಆ್ಯಪ್‌ಗೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿದ್ದು, ಈ ಕಾಲಮಿತಿಯ ಒಳಗಾಗಿ ಪರಿಹರಿಸಬೇಕಾಗಿದೆ. ಸಮಯ ಮೀರಿದ ದೂರುಗಳನ್ನು ಮೇಲಾಧಿಕಾರಿಗಳಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ.

Advertisement

ನಮ್ಮ ಬೆಂಗಳೂರು ಆ್ಯಪ್‌: ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರುಗಳನ್ನು ಒಂದೇ ತಂತ್ರಾಂಶದ ಮೂಲಕ ದಾಖಲಿಸಲು ನಮ್ಮ ಬೆಂಗಳೂರು ಎನ್ನುವ ತಂತ್ರಾಂಶವನ್ನು ಪರಿಚಯಿಸಲಾಗಿದ್ದು, ಈ ಆ್ಯಪ್‌ನ ಮೂಲಕ ಬಿಬಿಎಂಪಿ, ಬೆಸ್ಕಾಂ, ಬಿಎಂಆರ್‌ಸಿಎಲ್‌, ಬಿಡಿಎ, ಜಲ ಮಂಡಳಿ, ಬಿಎಂಟಿಸಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದಾಗಿದೆ. ಬಂದೇ ಆ್ಯಪ್‌ನ ಮೂಲಕ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು ದಾಖಲಿಸಬಹುದು. ಸಾರ್ವಜನಿಕರು ಈ ತಂತ್ರಾಂಶದಲ್ಲಿ ಲಿಖೀತ, ಛಾಯಾಚಿತ್ರ ಹಾಗೂ ವಿಡಿಯೋ ಮೂಲಕ ದೂರಿನ ವಿವರಗಳನ್ನು ದಾಖಲಿಸಬಹುದಾಗಿದೆ.

ಪಿ.ಒ.ಎಸ್‌ ದಂಡ ವಿಧಿಸುವ ಯಂತ್ರ: ಮಾರ್ಷಲ್‌ಗ‌ಳು ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿಗಳು ಇಲ್ಲಿಯವರೆಗೆ ಕಾಗದದ ಮೂಲಕ ದಂಡದ ಪ್ರತಿ ನೀಡು ತ್ತಿದ್ದರು. ಸದ್ಯ ಎಲೆಕ್ಟ್ರಾನಿಕ್‌ ಇ-ರಶೀದಿ ದಂಡ ವಿಧಿಸುವ ಯಂತ್ರ ವನ್ನು ಪರಿಚಯಿಸಲಾಗಿದೆ. ಯಂತ್ರದಲ್ಲಿ ದಂಡವನ್ನು ಈ ಯಂತ್ರಗಳ ಮುಖಾಂತರ ಘನತ್ಯಾಜ್ಯ ನಿರ್ವ ಹಣೆಗೆ ಅನುಸಾರವಾಗಿ ಮಾರ್ಷಲ್‌ಗ‌ಳು ದಂಡ ವಿಧಿಸ ಲಿದ್ದು, ಪಾರದರ್ಶಕತೆ ಸಿಗಲಿದೆ. ಇದೇ ವೇಳೆ ಹೊಸದಾಗಿ 17 ಯಾಂತ್ರಿಕ ಕಸ ಗುಡಿಸುವ ಯಂತ್ರ ಪರಿಚಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next