Advertisement

ಮಾರ್ಚ್‌ ಅಂತ್ಯಕ್ಕೆ ಎಲ್ಲಾ ಕಾರುಗಳಲ್ಲಿ 6 ಏರ್‌ಬ್ಯಾಗ್‌: ಸಚಿವ ನಿತಿನ್‌ ಗಡ್ಕರಿ

07:44 AM Sep 08, 2022 | Team Udayavani |

ನವದೆಹಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ, ಕಾರುಗಳಲ್ಲಿ ಸುರಕ್ಷತೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಈ ವಿತ್ತೀಯ ವರ್ಷದ ಅಂತ್ಯದೊಳಗೆ ಎಲ್ಲಾ ಕಾರುಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ.

Advertisement

ಈ ಸಂಬಂಧ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರೇ ಮಾಹಿತಿ ನೀಡಿದ್ದು, ಈ ನಿಯಮದ ಕರಡನ್ನು ಜನವರಿ ತಿಂಗಳಲ್ಲಿ ಹೊರತರಲಾಗಿದ್ದು, ಫೆಬ್ರವರಿಯಲ್ಲೇ ಜಾರಿಗೊಳಿಸಲು ಚಿಂತಿಸಲಾಗಿತ್ತು. ಆದರೆ ಹಲವು ಕಾರು ನಿರ್ಮಾಣ ಸಂಸ್ಥೆಗಳು ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನಿಯಮ ಜಾರಿಗೆ ತಡೆಯಾಗಿದೆ. ಆದರೆ ಅದನ್ನು ವಿತ್ತೀಯ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುವುದು. ಹಾಗೂ ಹಿಂಬದಿ ಸವಾರರು ಸೀಟ್‌ ಬೆಲ್ಟ್ ಧರಿಸದೇ ಹೋದರೆ ಅಲರಾಂ ರಿಂಗಣಿಸುವಂತೆ ವ್ಯವಸ್ಥೆ ಕಲ್ಪಿಸಲು ಕಾರು ನಿರ್ಮಾಣ ಸಂಸ್ಥೆಗಳಿಗೆ ಸೂಚಿಸಲಾಗುವುದು ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಗಡ್ಕರಿ ಅವರೇ ಹೇಳಿರುವ ಪ್ರಕಾರ, 2021ರಲ್ಲಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು ಒಂದೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಬದಲಾಗಿ ಕಾರುಗಳಲ್ಲಿ ಸುರಕ್ಷತಾ ಫೀಚರ್‌ಗಳು ಇದ್ದಿದ್ದರೆ ಸಾವುಗಳನ್ನು ತಡೆಯಬಹುದಾಗಿತ್ತು ಎಂದಿದ್ದಾರೆ.

ಸದ್ಯ ಕಾರು ಕಂಪನಿಗಳು ಆರು ಏರ್‌ಬ್ಯಾಗ್‌ ಅಳವಡಿಕೆಯಿಂದ ಕಾರುಗಳ ದರ ದುಬಾರಿಯಾಗುತ್ತದೆ ಎಂಬ ನೆಪ ಹೇಳುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕೇವಲ 900 ರೂ.ಗಳಿಗೆ ಪ್ರತಿ ಏರ್‌ಬ್ಯಾಗ್‌ ಅಳವಡಿಸಬಹುದಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next