ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ‘ಯಕ್ಷಗಾನ ವಿಶ್ವಕೋಶ’ವನ್ನು ಹೊರತರಲು ಮುಂದಾಗಿದೆ.
Advertisement
ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಅಕಾಡೆಮಿಯು ಈ ಕ್ರಮಕ್ಕೆ ಮುಂದಾಗಿದೆ.
ಅಕಾಡೆಮಿ ಸದಸ್ಯರಾದ ಮೈಸೂರಿನ ಜಿ. ಎಸ್. ಭಟ್ ಅವರಿಗೆ ಸಂಪಾದಕೀಯ ಮಂಡಳಿಯ ನೇತೃತ್ವವನ್ನು ವಹಿಸಲಾಗಿದೆ. ಈಗಾಗಲೇ ಅವರು ಹಲವು ವಿಶ್ವಕೋಶಗಳು ಹೊರಬರಲು ಸಹಾಯ ಮಾಡಿದ್ದು, ಅವರ ನೇತೃತ್ವದಲ್ಲಿ ಕೋಶವು ಉತ್ತಮವಾಗಿ ಹೊರಬರಲಿದೆ ಎಂಬ ವಿಶ್ವಾಸ ಅಕಾಡೆಮಿಯದ್ದಾಗಿದೆ.
Related Articles
ಇದರಲ್ಲಿ ಯಕ್ಷಗಾನ ಹುಟ್ಟು, ಬೆಳವಣಿಗೆ, ಅದಕ್ಕೆ ಸಂಬಂಧಿಸಿದ ವ್ಯಾಖ್ಯಾನ, ನೃತ್ಯವಿಧಾನ, ತಾಳಮದ್ದಳೆ, ಗೊಂಬೆಯಾಟ, ಮೂಡಲಪಾಯ, ಅರ್ಥಧಾರಿ, ಕೇಳಿಕೆ, ಪ್ರಸಾಧನ, ವಸ್ತ್ರಾಲಂಕಾರ ಸಹಿತ ಇನ್ನಿತರ ಪೂರಕ ಮಾಹಿತಿಗಳು ದೊರೆಯಲಿವೆ. ಹಿರಿಯ ಕಲಾವಿದರ ಪರಿಚಯವೂ ಇರಲಿವೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಎ. ಹೆಗಡೆ ತಿಳಿಸಿದ್ದಾರೆ.
Advertisement
50 ಲಕ್ಷ ರೂ. ವೆಚ್ಚ ಸಾಧ್ಯತೆಈ ವಿಶ್ವಕೋಶ ಹೊರತರಲು ಸುಮಾರು 50 ಲ. ರೂ. ಖರ್ಚಾಗುವ ಸಾಧ್ಯತೆಯಿದೆ. ಅಕಾಡೆಮಿಯಲ್ಲಿ ಈಗ ಅನುದಾನದ ಕೊರತೆಯಿದ್ದರೂ, ಇರುವುದನ್ನೇ ಬಳಸಿ ವಿಶ್ವಕೋಶ ಹೊರತರಲಾಗುವುದು ಎಂದು ಅಕಾಡೆಮಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒಂದೇ ಪುಸ್ತಕದಲ್ಲಿ ದೊರೆಯಲಿ ಎಂಬ ಉದ್ದೇಶದಿಂದ ಅಕಾಡೆಮಿಯು “ಯಕ್ಷಗಾನ ವಿಶ್ವಕೋಶ’ ಹೊರತರಲು ಮುಂದಾಗಿದೆ. ಯಕ್ಷಗಾನಕ್ಕೆ ಸಂಬಂಧಿಸಿದ ಹಲವು ಪೂರಕ ಮಾಹಿತಿಗಳು ಇದರಲ್ಲಿ ದೊರೆಯಲಿವೆ.
– ಪ್ರೊ| ಎಂ. ಎ. ಹೆಗಡೆ, ಅಧ್ಯಕ್ಷರು ಕರ್ನಾಟಕ ಯಕ್ಷಗಾನ ಅಕಾಡೆಮಿ