Advertisement
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಹಾಗೆ ನಾವು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ನಮ್ಮ ಮಾತುಗಳು ಇನ್ನೊಬ್ಬರಿಗೆ ಸಂತಸವನ್ನುಂಟು ಮಾಡದಿದ್ದರೂ ಪರವಾಗಿಲ್ಲ ಆದರೆ ನೋವು, ದುಃಖ, ಸಂಕಟಗಳನ್ನುಂ
Related Articles
Advertisement
ಸಂದರ್ಭಕ್ಕೆ ತಕ್ಕಂತೆ ಮಾತನಾಡಿದರೆ ನಮ್ಮನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳುವಂತಾಗುತ್ತದೆ. ಅನಗತ್ಯವಾಗಿ, ಅನಾವಶ್ಯಕವಾಗಿ, ಅನುಚಿತವಾಗಿ ಮಾತನಾಡಿದರೆ ಅದು ಕ್ಷುಲ್ಲಕವಾಗಿ ಹಲವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಒಂದು ನಿಷ್ಪ್ರಯೋಜಕವಾದ, ನೋವುಂಟುಮಾಡುವ ಮಾತಿನಿಂದ ಒಬ್ಬ ಒಳ್ಳೆಯ ವ್ಯಕ್ತಿಯನ್ನು ದೂರ ಮಾಡಿದಂತಾಗಬಹುದು. ಹೀಗಾಗಿ ನಮಗೆ ಸಂಬಂಧವೇ ಇಲ್ಲದ ಗೊಡ್ಡು ವಾದವನ್ನು ಮಾಡಿ ಸಮಯ ಹಾಗೂ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವ ಬದಲು ತಟಸ್ಥರಾಗಿ ಉಳಿದುಬಿಡುವುದು ಒಳ್ಳೆಯದಲ್ಲವೇ? ಆ ಒಂದು ಗೊಡ್ಡು ವಾದದಲ್ಲಿ ಸೋತರೂ ಚಿಂತೆಯಿಲ್ಲ, ಒಂದೊಳ್ಳೆಯ ಸಂಬಂಧಕ್ಕೆ ಬೆಲೆ ಕೊಟ್ಟ ನಿಮ್ಮ ದೊಡ್ಡ ಗುಣ ಆದರ್ಶಪ್ರಾಯವಾಗಿರುತ್ತದೆ.
ನಗುನಗುತ್ತಾ ಮಾತನಾಡುವ ಶೈಲಿ ನಿಮ್ಮದಾಗಿದ್ದರೆ ಖಂಡಿತವಾಗಿಯೂ ನೀವು ಅಪಾರವಾದ ಮನಸ್ಸುಗಳನ್ನು ಗೆದ್ದಿರುತ್ತೀರಿ. ಅಂತಹ ಮಾತಿನಲ್ಲಿ ಸ್ಪಷ್ಟತೆ, ನಿಖರತೆ ಹೆಚ್ಚಾಗಿರುತ್ತದೆ. ಅಲ್ಲಿರುವ ಆತ್ಮವಿಶ್ವಾಸವೂ ಕೂಡ ಸೆಳೆಯುವಂತೆ ಮಾಡುತ್ತದೆ. ಮುಖವನ್ನು ಗಂಟಿಕ್ಕಿ, ಗಂಭೀರವಾಗಿ ಮಾತನಾಡುವ ಜನರನ್ನು ಈ ಜಗತ್ತಿನಲ್ಲಿ ಯಾರೂ ಇಷ್ಟಪಡಲಾರರು. ನಮ್ಮ ಮಾತಿನಲ್ಲಿ ತಿಳಿಹಾಸ್ಯವಿದ್ದರೆ ನಾವು ಜಗತ್ತನ್ನೇ ಗೆಲ್ಲಬಹುದೇನೋ? ತಮಾಷೆಯ ನೆಪದಲ್ಲಿ ಇನ್ನೊಬ್ಬರ ಮನಸ್ಸು ನೋಯಿಸುವ ಮಾತುಗಳು ಬೇಡವೇ ಬೇಡ. ಆ ಒಂದು ಮಾತು ನಮಗೆ ತಮಾಷೆಯಾಗಿರಬಹುದು, ಅದು ಹಲವರಿಗೆ ಅತ್ಯಂತ ಹೆಚ್ಚಿನ ನೋವು ತಂದು ಹತಾಶೆಯನ್ನುಂಟುಮಾಡಬಹುದು.
ನಾವು ಅಹಂಕಾರದಿಂದಾಗಲಿ, ಸೊಕ್ಕಿನಿಂದಾಗಲಿ ಮಾತನಾಡಿದರೆ ಯಾರೂ ನಮ್ಮ ಹತ್ತಿರ ಕೂಡ ಸುಳಿಯಲಾರರು. ಅಹಂಕಾರಕ್ಕೆ ಅಹಂಕಾರಿಗಳನ್ನು ಅಲಕ್ಷಿಸುತ್ತಾ ಮುನ್ನಡೆಯುತ್ತಾರೆ. ಆದ್ದರಿಂದ ಸಂಕುಚಿತ ಮನೋಭಾವ ಬಿಟ್ಟು ವಿಶಾಲ ಮನಸ್ಸಿನಿಂದ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು. ನಮ್ಮಲ್ಲಿರುವ ಹಣ, ಆಸ್ತಿ, ಅಂತಸ್ತುಗಳ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವ ಬದಲು ಹೃದಯ ಶ್ರೀಮಂತಿಕೆಯನ್ನು ಸಾರುವ ಪ್ರೀತಿಯ ಮಾತುಗಳು ನಮ್ಮನ್ನು ಆಗರ್ಭ ಶ್ರೀಮಂತರನ್ನಾಗಿಸುತ್ತವೆ. ಏರು ಧ್ವನಿಯಲ್ಲಿ ಅಥವಾ ಪಿಸುಪಿಸು ಮಾತಿನಿಂದ ನಾವು ಮಾತಿನ ದಾಟಿಯನ್ನು ಕಳೆದುಕೊಳ್ಳುತ್ತೇವೆ. ಇನ್ನೊಬ್ಬರಿಗೆ ತೊಂದರೆಯಾಗದ ಹಾಗೆ ಸೂಕ್ಷ್ಮವಾಗಿ, ಸಂವೇದನಾಶೀಲತೆಯಿಂದ ಮಾತನಾಡಬೇಕು.
ಶ್ರೀನಿವಾಸ ಎನ್.ದೇಸಾಯಿ
ಮದ್ಲೂರ, ಕೊಪ್ಪಳ