ನವದೆಹಲಿ: ಸೆಬಿ(SEBI) ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ ನಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿದ್ದಾರೆ ಎಂಬ ಅಮೆರಿಕ ಮೂಲದ ಹಿಂಡನ್ ಬರ್ಗ್(Hindenburg) ಸಂಶೋಧನಾ ವರದಿಯಲ್ಲಿ ಬಹಿರಂಗಗೊಂಡ ನಂತರ ಸೋಮವಾರ (ಆಗಸ್ಟ್ 12) ಷೇರುಪೇಟೆ ವಹಿವಾಟಿನಲ್ಲಿ ಅದಾನಿ(Adani Group) ಸಮೂಹ ಸಂಸ್ಥೆಯ ಎಲ್ಲಾ 10 ಷೇರುಗಳ ಬೆಲೆ ಕುಸಿತ ಕಂಡಿರುವ ಬೆಳವಣಿಗೆ ನಡೆದಿದೆ.
ಅದಾನಿ(Adani Share) ಷೇರು ಅವ್ಯವಹಾರದ ವರದಿ ನಂತರ ಅದಾನಿ ಸಮೂಹದ ಅದಾನಿ ಎನರ್ಜಿ ಸೊಲ್ಯುಷನ್ಸ್ ಶೇ.17ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇ.13.39ರಷ್ಟು ಎನ್ ಡಿಟಿವಿ ಶೇ.11ರಷ್ಟು, ಅದಾನಿ ಪವರ್ ಶೇ.10.94ರಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ:BJP; ಒಂದೇ ಮನಸ್ಸಿನವರು ಚರ್ಚೆ ಮಾಡಲು ಸೇರಿದ್ದೆವು ಅಷ್ಟೇ.: ಶಾಸಕ ಬಿ.ಪಿ. ಹರೀಶ್
ಅದಾನಿ ಗ್ರೀನ್ ಎನರ್ಜಿ ಶೇ.6.96ರಷ್ಟು, ಅದಾನಿ ವಿಲ್ಮಾರ್ ಶೇ.6.49ರಷ್ಟು, ಅದಾನಿ ಎಂಟರ್ ಪ್ರೈಸಸ್ ಶೇ.5.43ರಷ್ಟು, ಅದಾನಿ ಪೋರ್ಟ್ಸ್ ಶೇ.4.95ರಷ್ಟು, ಅಂಬುಜಾ ಸಿಮೆಂಟ್ಸ್ ಶೇ.2.53ರಷ್ಟು, ಎಸಿಸಿ ಶೇ.2.42ರಷ್ಟು ಇಳಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.
ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಬರ್ಮುಡಾ ಮತ್ತು ಮಾರಿಷಸ್ ನಲ್ಲಿ ಅದಾನಿ ನಕಲಿ ಕಂಪನಿಯಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿರುವುದಾಗಿ ಹಿಂಡನ್ ಬರ್ಗ್ ವರದಿ ಆರೋಪಿಸಿತ್ತು. ಆದರೆ ಹಿಂಡನ್ ಬರ್ಗ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸೆಬಿ ತಿರುಗೇಟು ನೀಡಿತ್ತು.