ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್‌ಜಿಸಿ)ಕ್ಕೆ ಮೊದಲ ಮಹಿಳಾ ವ್ಯವಸ್ಥಾಪಕ-ನಿರ್ದೇಶಕಿಯನ್ನಾಗಿ ಅಲ್ಕಾ ಮಿತ್ತಲ್ ಅವರನ್ನು ನೇಮಕ ಮಾಡಲಾಗಿದೆ.
2021 ಡಿ.31ರಂದು ಹುದ್ದೆಯಿಂದ ನಿವೃತ್ತಿಯಾದ ಸುಭಾಷ್ ಕುಮಾರ್ ಅವರ ಸ್ಥಾನಕ್ಕೆ ಅಲ್ಕಾ ನೇಮಕಗೊಂಡಿದ್ದಾರೆ.
ಮಿತ್ತಲ್ ಅವರು 2018ರಲ್ಲಿ ಒಎನ್‌ಜಿಸಿಯ ಮಾನವ ಸಂಪನ್ಮೂಲ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು. ಆ ಸಂದರ್ಭದಲ್ಲಿಯೂ ಅವರು ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು.
ಇದನ್ನೂ ಓದಿ:ಯುವಶಕ್ತಿಯಿಂದ ಭಾರತ ವಿಶ್ವ ಗುರುವಾಗಲು ಸಾಧ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
2014ರ ಮಾರ್ಚ್‌ನಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂನ ಮುಖ್ಯಸ್ಥರಾಗಿ ನಿಶಿ ವಾಸುದೇವ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮತ್ತೊಬ್ಬ ಮಹಿಳೆ, ಸರ್ಕಾರಿ ಸ್ವಾಮ್ಯದ ಕಂಪನಿಯ ಮುಖ್ಯಸ್ಥರ ಹುದ್ದೆಗೆ ಏರಿದಂತಾಗಿದೆ.