Advertisement

ಹಗಲಿನಲ್ಲಿ ಅಲ್‌ಜಜೀರಾ ಪತ್ರಕರ್ತ, ರಾತ್ರಿ ವೇಳೆ ಹಮಾಸ್‌ ಕಮಾಂಡರ್‌!

12:55 AM Feb 13, 2024 | Team Udayavani |

ಹೊಸದಿಲ್ಲಿ: ಕತಾರ್‌ ಮೂಲದ ಅಲ್‌ಜಜೀರಾ ಸುದ್ದಿವಾಹಿನಿಯ ಖ್ಯಾತ ಪತ್ರಕರ್ತರೊಬ್ಬರು ಹಮಾಸ್‌ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಮಿಲಿಟರಿ ಉಪಕರಣಗಳ ತಯಾರಿಕೆಗೆ ನೆರವು ನೀಡಿದ್ದಾರೆ ಎಂದು ಇಸ್ರೇಲ್‌ ಆರೋಪಿಸಿದೆ. “ಈತ ಹಗಲು ಪತ್ರಕರ್ತನಾಗಿ­ದ್ದರೆ, ರಾತ್ರಿ ಹಮಾಸ್‌ ಕಮಾಂಡರ್‌ ಆಗಿ ಕಾರ್ಯನಿರ್ವಹಿ­ಸುತ್ತಿದ್ದಾನೆ’ ಎಂಬ ಗಂಭೀರ ಆರೋಪವನ್ನೂ ಮಾಡಿದೆ.

Advertisement

ಹಿರಿಯ ವರದಿಗಾರ ಮೊಹಮ್ಮದ್‌ ವಾಷಾಹ್‌ ಹಮಾಸ್‌ನ ಹಿರಿಯ ಕಮಾಂಡರ್‌ ಆಗಿ ಮೂನ್‌ಲೈಟಿಂಗ್‌(ನಿಯಮಿತ ಉದ್ಯೋಗದ ಜತೆಗೆ ರಹಸ್ಯವಾಗಿ ಇನ್ನೊಂದು ಉದ್ಯೋಗ ಮಾಡು­ವುದು) ಮಾಡುತ್ತಿದ್ದು, ಡ್ರೋನ್‌, ಗ್ರೆನೇಡ್‌ ಸೇರಿ ಹಲವು ಸೇನಾ ಉಪಕರಣಗಳ ತಯಾರಿಕೆಗೆ ನೆರವು ನೀಡಿದ್ದಾರೆ. ಅವರಿಂದ ವಶಪಡಿಸಿಕೊಳ್ಳ­ಲಾದ ಲ್ಯಾಪ್‌ಟಾಪ್‌ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿ ಯುದ್ಧೋಪಕರಣಗಳ ತಯಾರಿಕೆ­ಯಲ್ಲಿ ತೊಡಗಿರುವ ಫೋಟೋಗಳು ದೊರೆತಿವೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಇಬ್ಬರು ಒತ್ತೆಯಾಳುಗಳ ರಕ್ಷಣೆ
ಗಾಜಾ ಪಟ್ಟಿಯಲ್ಲಿ ಉಗ್ರರ ಒತ್ತೆಯ­ಲ್ಲಿದ್ದ ಇಬ್ಬರನ್ನು ಇಸ್ರೇಲ್‌ ಸೇನೆ ಸೋಮವಾರ ರಕ್ಷಿಸಿದೆ. ಈ ಕಾರ್ಯಾಚರಣೆ ವೇಳೆ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ. ಇನ್ನೂ 100ರಷ್ಟು ಇಸ್ರೇಲಿಯರು ಉಗ್ರರ ಒತ್ತೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next