ನಟಿ ಆಲಿಯಾ ಭಟ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಗೆ ತಯಾರಾಗಿದೆ. ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾರಿ ಅವರ ಸಿನಿಮಾದ ಟ್ರೇಲರ್ ಫೆ.4ರಂದು ಬಿಡುಗಡೆಯಾಗಲಿದ್ದು, ಚಿತ್ರವು ಫೆ.25ರಂದು ತೆರೆಗಪ್ಪಳಿಸಲಿದೆ.
ಅಜಯ್ ದೇವಗನ್ ಕೂಡಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರದ ಶೂಟಿಂಗ್ ಕಳೆದ ವರ್ಷದ ಜುಲೈನಲ್ಲಿ ಅಂತ್ಯವಾಗಿತ್ತು. ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ನಟಿ ಆಲಿಯಾ ಭಟ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಬರ್ಲಿನ್ ಫಿಲ್ಮ್ ಫೆಸ್ಟಿವಲ್ 2022 ರಲ್ಲಿ ಪ್ರದರ್ಶಿಸಲಾದ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಕಳೆದ ತಿಂಗಳು ಘೋಷಿಸಲಾಗಿತ್ತು.
ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧಾರಿತವಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಜಯಂತಿಲಾಲ್ ಗಡ ನಿರ್ಮಿಸಿದ್ದಾರೆ. ಅಲಿಯಾ ಭಟ್ ಜೊತೆಗೆ, ಅಜಯ್ ದೇವಗನ್ ಮತ್ತು ಶಾಂತನು ಮಹೇಶ್ವರಿ ಕೂಡ ನಟಿಸಿದ್ದಾರೆ.
ಚಿತ್ರವು ಕಾಮಾಠಿಪುರದ ರೆಡ್ ಲೈಟ್ ಏರಿಯಾದಲ್ಲಿ ಗಂಗಾ ಎಂಬ ಮಹಿಳೆಯು ಗಂಗೂಬಾಯಿ ಎಂಬ ಮೇಡಮ್ ಆಗುವ ಕಥೆಯ ಪಾತ್ರವನ್ನು ಆಲಿಯಾ ನಿರ್ವಹಿಸಿದ್ದಾರೆ.