ಮುಂಬೈ: ಇತ್ತಿಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಬಾಲಿವುಡ್ ಸೆಲೆಬ್ರೆಟಿಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಆಲಿಯಾ ಭಟ್ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ನಲ್ಲಿ ಮಲಗಿ ತಮ್ಮ ಮುಂಬರುವ ಮಗುವಿನ ಅಲ್ಟ್ರಾಸೌಂಡ್ ಅನ್ನು ತೋರಿಸುವ ಪರದೆಯತ್ತ ನೋಡುವ ಚಿತ್ರವನ್ನು ಆಲಿಯಾ ಭಟ್ ಪೋಸ್ಟ್ ಮಾಡಿದ್ದಾರೆ. ಅಲ್ಲದೆ “ನಮ್ಮ ಮಗು.. ಕಮಿಂಗ್ ಸೂನ್” ಎಂದು ಬರೆದುಕೊಂಡಿದ್ದಾರೆ.
ಆಲಿಯಾ ಮತ್ತು ರಣಬೀರ್ ಈ ವರ್ಷ ಏಪ್ರಿಲ್ 14 ರಂದು ಬಾಂದ್ರಾದಲ್ಲಿರುವ ಆರ್ಕೆ ನಿವಾಸದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಅವರಿಬ್ಬರೂ ಕಳೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದರು.
ಇದನ್ನೂ ಓದಿ:ಕಲರ್ಫುಲ್ ಇವೆಂಟ್ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್
Related Articles
29 ವರ್ಷದ ಆಲಿಯಾ ಭಟ್ ಅವರ ನಟನೆಯ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಡಾರ್ಲಿಂಗ್ಸ್, ತಕ್ತ್ ಮುಂತಾದ ಚಿತ್ರಗಳಲ್ಲಿ ಆಲಿಯಾ ನಟಿಸುತ್ತಿದ್ದಾರೆ.