Advertisement

ವಾಯುಮಾಲಿನ್ಯ ನಿಯಂತ್ರಣಕ್ಕೆ ಪಾಚಿ ಬಳಕೆ ಅಗತ್ಯ

11:21 PM Mar 14, 2020 | mahesh |

ವಾಯುಮಾಲಿನ್ಯವು ಇಂದು ದೇಶವನ್ನು ಅನೇಕ ಸಮಸ್ಯೆಗಳಿಗೀಡು ಮಾಡುತ್ತಿದೆ. ಇದರಿಂದ ಪರಿಸರವು ಹಾಳಾಗುತ್ತಿದೆ ಮತ್ತು ಮನುಕುಲದ ಆರೋಗ್ಯದ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಆಡಳಿತ ಸಹಿತ ಸಾಮಾನ್ಯ ಜನರು ಕೂಡ ವಾಯು ಮಾಲಿನ್ಯ ನಿಯಂತ್ರಣಕ್ಕೆ ಹಲವಾರು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ.

Advertisement

ನಗರೀಕರಣದಿಂದ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಇವುಗಳು ಉಗುಳುವ ಹೊಗೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕಾಗಿ ಆಡಳಿತ ವ್ಯವಸ್ಥೆಯೂ ಕೂಡ ಹಲವಾರು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರಗಿಸಿದರೂ ಕೂಡ ಏತನ್ಮಧ್ಯೆ ವಾಯು ಮಾಲಿನ್ಯದ ಹೆಚ್ಚಳವಾಗುತ್ತಿದೆ ವಿನಾ ಕಡಿಮೆಯಾಗುತ್ತಿಲ್ಲ. ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರುನಂತಹ ಮಹಾನಗರಗಳಲ್ಲಿ ಮಾಲಿನ್ಯ ಪ್ರಮಾಣವನ್ನು ಗಮನಿಸಬಹುದು. ಇದಕ್ಕೆ ನಾವು ಸೂಕ್ತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಚಿಯ ಬಳಕೆಯಿಂದಾಗಿ ವಾಯು ಮಾಲಿನ್ಯ ನಿಯಂತ್ರಿಸಬಹುದು ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದಿದೆ. ಪಾಚಿಯನ್ನು ಸಮರ್ಪಕ, ಪರಿಣಾಮಕಾರಿಯಾಗಿ ಬಳಕೆ ಮಾಡಿದರೆ ನಾವು ಮಾಲಿನ್ಯ ನಿಯಂತ್ರಿಸಬಹುದಾಗಿದೆ.

ಯಾರಿಂದ ಸಂಶೋಧನೆ ?
ಪಾಚಿಯಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದು ಯುವ ಸಂಶೋಧಕ ಕೀರ್ತನ್‌ ಶಂಕರ್‌ ಮತ್ತು ಗಗನ್‌ ಗೌಡ ಎಂಬ ಇಬ್ಬರು ಸಂಶೋಧಕರು ಇದನ್ನು ಸಂಶೋಧಿಸಿದರು. ಇವರು ಪ್ರಮುಖ ನಗರಗಳಿಗೆ ಬಾಧಿಸುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿಯೇ ಗ್ರೀನ್‌ ಸಿಟಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಅರಿತು, ಇದಕ್ಕಾಗಿ ಪಾಚಿಯಿಂದ ಪರಿಹಾರ ಕಂಡುಕೊಂಡಿದ್ದಾರೆ. ಗಿಡಗಳ ರೂಪದಲ್ಲಿ ಬೆಳೆಸುವುದು ಅಥವಾ ನಮ್ಮ ಮನೆಗಳ ಗೋಡೆಗಳಿಗೆ ಪಾಚಿಯನ್ನು ಅಂಟಿಸುವುದರಿಂದ ಇದು ವಾಯು ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂಬುದನ್ನು ತಮ್ಮ ಸಂಶೋಧನೆಯ ಮೂಲಕ ಅವರು ತಿಳಿಸಿದ್ದಾರೆ.

ಎಲ್ಲೆಲ್ಲಿ ಪ್ರಯೋಗ
ಅಮೆರಿಕ, ಬರ್ಲಿನ್‌ ದೇಶಗಳಲ್ಲಿ ಈ ಮಾದರಿಯ ಪಾಚಿ ಮರಗಳಲ್ಲಿ ಸಾರ್ವಜನಿಕ ಪ್ರದೇಶಗಳನ್ನು ನೆಡಲಾಗುತ್ತದೆ. ಇದರಿಂದ ವಾಯು ಮಾಲಿನ್ಯ ನಿಯಂತ್ರಿಸಲಾಗುತ್ತದೆ. ಈ ಮಾದರಿಯನ್ನು ನಾವು ನಮ್ಮ ನಗರಗಳಲ್ಲಿ ಅಳವಡಿಸಬೇಕಿದೆ ಅಷ್ಟೇ. ಈಗಾಗಲೇ ಸ್ಮಾರ್ಟ್‌ ಸಿಟಿ ಪಟ್ಟಿಯಲ್ಲಿರುವ ನಮ್ಮ ಮಂಗಳೂರು ಸ್ವತ್ಛ ಮಂಗಳೂರ ಮಾಡಲು ಹಲವಾರು ಪ್ರಯೋಗಗಳನ್ನು ಮಾಡಲಾಗುತ್ತಿದ್ದು ಪಾಚಿ ಮರಗಳಿಗೆ ಆದ್ಯತೆ ನೀಡುವ ಮೂಲಕ ನಾವು ವಾಯು ಮಾಲಿನ್ಯ ನಿಯಂತ್ರಣಕ್ಕೆ ಪಣ ತೊಡಬೇಕು.

ಪಾಚಿ ಗಿಡಗಳಿಂದ ಹೇಗೆ ಕಾರ್ಯ ನಿರ್ವಹಣೆ
ನೈಸರ್ಗಿಕ ಪಾಚಿ ಗಿಡಗಳನ್ನು ನೆಡುವುದರಿಂದ ಇವು ಕಾರ್ಬನ್‌ ಡೈ ಆಕ್ಸೆ„ಡ್‌, ಧೂಳಿನ ಕಣಗಳನ್ನು ನಿಯಂತ್ರಿಸುತ್ತವೆ . ಅಲ್ಲದೇ ಕಾರ್ಬನ್‌ ಡೈ ಆಕ್ಸೆ„ಡ್‌ನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಪಾಚಿಗಳೂ ಪ್ರಮುಖವಾಗಿ ಕಾರ್ಯನಿರ್ವಹಿ ಸುತ್ತವೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಇದು ನಮ್ಮ ನಗರಗಳಿಗೆ ಪೂರಕ ಯೋಜನೆಯನ್ನು ಸಿದ್ಧಮಾಡಬಹುದಾಗಿದೆ.

Advertisement

ನಾವೇನು ಮಾಡಬಹುದು?
ವಾಯು ಮಾಲಿನ್ಯ ನಿಯಂತ್ರಣಕ್ಕೆ ನಾವೇನು ಮಾಡಬಹುದು ಎಂದಾಗ ನಮ್ಮಿಂದಲೇ ಮಾಲಿನ್ಯವಾಗುವಾಗ ಅದರ ನಿಯಂತ್ರಣ ಕೂಡ ನಮ್ಮಿಂದಲೇ ಆಗಬೇಕಿದೆ. ಈ ಕಾರಣಕ್ಕಾಗಿ ನಾವು ಪಾಚಿಯನ್ನು ಹೆಚ್ಚಿನ ರೀತಿಯಲ್ಲಿ ಬಳಕೆ ಮಾಬೇಕಾಗುತ್ತದೆ. ಅದಕ್ಕಾಗಿ ನೈಸರ್ಗಿಕ ಪಾಚಿ ಮರಗಳನ್ನು ಕೂಡ ನಾವು ಬೆಳೆಸಬೇಕು. ನಮ್ಮ ಮನೆ, ರೆಸ್ಟೋರೆಂಟ್‌ ಮತ್ತು ಬಹುಮಹಡಿ ಕಟ್ಟಡಗಳನ್ನು ಕಟ್ಟುವಾಗ ಗೋಡೆಗಳಿಗೆ ಪಾಚಿ ಬಳಕೆ ಮಾಡುವುದು ಒಳಿತು ಎಂಬುದು ಕಾಳಜಿಯ ಅಭಿಪ್ರಾಯ. ಇದಕ್ಕೆ ನಾವು ಪಣತೊಡಬೇಕಿದೆ ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next