ಮೈಸೂರು: ಸಿಎಫ್ಟಿಆರ್‌ಐನಿಂದ ತಯಾರಿಸಿದ ಸ್ಪಿರುಲಿನಾ ಚಿಕ್ಕಿಯ (ಪಾಚಿ ಕಡಲೆ ಮಿಠಾಯಿ) ಪ್ರಭಾವದಿಂದ ಮೈಸೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೋವಿಡ್ ನಿಯಂತ್ರಣಕ್ಕೂ ಸ್ಪಿರುಲಿನಾ ಚಿಕ್ಕಿಗೂ ಸಂಬಂಧವಿಲ್ಲ ಎಂದು ಸಿಎಫ್ಟಿಆರ್‌ಐ ನಿರ್ದೇಶಕ ಡಾ.ರಾಘವರಾವ್ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ 19 ನಿಯಂತ್ರಣ ಸಂಬಂಧ ಸಿಎಫ್ಟಿಆರ್‌ಐಗಿಂತ ವೈದ್ಯರು ಹಾಗೂ ಜಿಲ್ಲಾಡಳಿತದ ಪರಿಶ್ರಮವೇ ಹೆಚ್ಚು. ಈ ಸಂಬಂಧ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾದ ವರದಿಯಲ್ಲಿ ಅಂಶವನ್ನು ತಪ್ಪಾಗಿ ಬಿಂಬಿಸಲಾಗಿದೆ. ಕಳೆದ 2-3 ದಿನಗಳಿಂದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಸಮುದ್ರದ ಪಾಚಿ ಬಳಿಸಿಕೊಂಡು ಮೈಸೂರಿನ ಸಿಎಫ್ಟಿಆರ್‌ಐ ಪಾಚಿ ಮಿಠಾಯಿ ತಯಾರಿಸಿದ್ದು, ಇದು ದೇಹದ ಕ್ಷಮತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಹೀಗಾಗಿ ಕೋವಿಡ್ ರೋಗಿಗಳಿಗೆ ಹಾಗೂ ಕೋವಿಡ್ ವಾರಿಯರ್ಸ್‌ಗೆ ಇದನ್ನು ನೀಡಲು ಬಳಕೆ ಮಾಡಲಾಗುತ್ತಿದೆ. ಸಿಎಫ್ ಟಿಆರ್‌ಐ ಮೂಲಕ ಅಗತ್ಯ ಇರುವ ಕಡೆ ಸರಬರಾಜು ಮಾಡಲಾಗುತ್ತಿದ್ದು, ಈಗಾಗಲೇ ಮೈಸೂರು, ಬೆಂಗಳೂರು, ಮಂಡ್ಯದಲ್ಲಿ ಬಳಕೆ ಯಾಗುತ್ತಿದೆ. ದೆಹಲಿಯ ಏಮ್ಸ್ ಆಸ್ಪತ್ರೆಗೂ ವಿತರಣೆ ಮಾಡಲಾಗಿದ್ದು, ಅಲ್ಲಿನ ಸೋಂಕಿತರಿಗೆ ವೈದ್ಯರು ನೀಡಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಮತ್ತಷ್ಟು ಬೇಡಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು, ಈ ಮಿಠಾಯಿ
ಇರುವುದು ನಿಜ. ಆದರೆ ಕೋವಿಡ್ ವ್ಯಕ್ತಿಗಳಿಗೆ ನಿಡುತ್ತಿರುವುದು ಸುಳ್ಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.