Advertisement
ಅಲೆಕ್ಸಾಂಡರ್ ಜ್ವೆರೇವ್ ಇದಕ್ಕೂ ಮುನ್ನ 2017ರಲ್ಲಿ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಆಗ ಅವರಿಗೆ ಕೇವಲ 20 ವರ್ಷ ಆಗಿತ್ತು. ಈ ಸಾಧನೆಯೊಂದಿಗೆ ಅಲೆಕ್ಸಾಂಡರ್ ಜ್ವೆರೇವ್ ಫ್ರೆಂಚ್ ಓಪನ್ ಆಗಮನದ ಹೊತ್ತಿಗೆ ನಿಧಾನವಾಗಿ ಫಾರ್ಮ್ಗೆ ಮರಳಿದ ಸೂಚನೆ ನೀಡಿದ್ದಾರೆ. ರ್‍ಯಾಂಕಿಂಗ್‌ನಲ್ಲೂ 4ನೇ ಸ್ಥಾನಕ್ಕೆ ಏರಿದ್ದಾರೆ. ಇದು ಜ್ವೆರೇವ್‌ಗೆ ಒಲಿದ 6ನೇ ಮಾಸ್ಟರ್ ಪ್ರಶಸ್ತಿ.
ವನಿತಾ ಡಬಲ್ಸ್ ಪ್ರಶಸ್ತಿ ತವರಿನ ಸಾರಾ ಎರಾನಿ-ಜಾಸ್ಮಿನ್ ಪೌಲಿನಿ ಪಾಲಾಗಿದೆ. ಶ್ರೇಯಾಂಕ ರಹಿತರಾದ ಇವರು ಕೊಕೊ ಗಾಫ್-ಎರಿನ್ ರೌಟಿಫ್ ವಿರುದ್ಧ 6-3, 4-6, 10-8 ಅಂತರದ ರೋಚಕ ಜಯ ಸಾಧಿಸಿದರು.