Advertisement
ರವಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅಲೆಕ್ಸಾಂಡರ್ ಜ್ವರೇವ್ ತಮ್ಮದೇ ದೇಶದ ಫಿಲಿಪ್ ಕೋಹ್ಲ ಶ್ರೀಬರ್ ವಿರುದ್ಧ 6-3, 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಇದು 2018ರಲ್ಲಿ ಜ್ವರೇವ್ ಜಯಿಸಿದ ಮೊದಲ ಟೆನಿಸ್ ಪ್ರಶಸ್ತಿಯಾಗಿದೆ.
ವಿಶ್ವದ ನಂ.3 ಟೆನಿಸಿಗನಾಗಿರುವ ಜ್ವರೇವ್ ಕಳೆದ ವರ್ಷದ ಫ್ರೆಂಚ್ ಓಪನ್ ಕೂಟದಲ್ಲಿ ಮೊದಲ ಸುತ್ತಿ ನಲ್ಲೇ ಸೋತು ನಿರ್ಗಮಿಸಿದ್ದರು. ಅಂದು ಮ್ಯೂನಿಚ್ ಓಪನ್ ಪ್ರಶಸ್ತಿ ಜಯಿಸಿದ್ದರೂ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಇದು ಜ್ವರೇವ್‌ಗೆ
ಯಾವುದೇ ಲಾಭ ತಂದು ಕೊಟ್ಟಿರಲಿಲ್ಲ. ಈ ವರ್ಷ ಪರಿಸ್ಥಿತಿ ಬದಲಾದೀತೆಂಬ ನಂಬಿಕೆ ಜರ್ಮನ್ ಟೆನಿಸಿಗನದ್ದು.
3 ಬಾರಿಯ ಚಾಂಪಿಯನ್ ಕೋಹ್ಲಶ್ರೀಬರ್ ಮೊದಲ ಸೆಟ್‌ನಲ್ಲಿ 3-2ರ ಮುನ್ನಡೆಯಲ್ಲಿದ್ದರು. ಆದರೆ ಜ್ವರೇವ್ ಕೂಡಲೇ ತಿರುಗಿ ಬಿದ್ದು ಹಿಡಿತ ಸಾಧಿಸಿದರು. “ಮಾಂಟೆ ಕಾರ್ಲೋದಲ್ಲೂ ನಾನು ಉತ್ತಮ ಪ್ರದರ್ಶನ ನೀಡಿದ್ದೆ. ಮ್ಯೂನಿಚ್ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದೇ ಲಯವನ್ನು ಕಾಯ್ದುಕೊಂಡರೆ ಮುಂಬರುವ ಫ್ರೆಂಚ್ ಓಪನ್‌ನಲ್ಲಿ ಬಹಳ ದೂರ ಸಾಗುವ ನಿರೀಕ್ಷೆ ಹೊಂದಿದ್ದೇನೆ’ ಎಂದು ಅಲೆಕ್ಸಾಂಡರ್ ಜ್ವರೇವ್ ಪ್ರತಿಕ್ರಿಯಿಸಿದ್ದಾರೆ. ಎಪ್ರಿಲ್‌ನಲ್ಲಿ ನಡೆದ ಮಾಂಟೆ ಕಾರ್ಲೊ ಮಾಸ್ಟರ್ ಟೆನಿಸ್ ಪಂದ್ಯಾವಳಿಯಲ್ಲಿ ಜ್ವರೇವ್ ಸೆಮಿಫೈನಲ್ ತನಕ ಸಾಗಿದ್ದರು.