Advertisement

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

05:12 PM Aug 11, 2021 | Team Udayavani |

ಹೊಸದಿಲ್ಲಿ: “ಈಗ ಗಂಟೆ ಎಷ್ಟು’ ಎಂದು ಪ್ರಶ್ನೆ ಮಾಡಿದರೆ ನಿಖರವಾಗಿ ಸಮಯ ಹೇಳುವ ಅಮೆಜಾನ್‌ನ ಅಲೆಕ್ಸಾಗೆ ಜತೆಗಾರ ಸಿಕ್ಕಿದೆ. ಅದರ ಹೆಸರೇ “ಝಿಗಿ'(Ziggy). ಹೀಗಾಗಿ, ಗ್ರಾಹಕರಿಗೆ ಎರಡು ಆಯ್ಕೆಗಳು ಸಿಕ್ಕಿದಂತಾಗಿವೆ. ಖರೀದಿಯ ಬಳಿಕ ಕೂಡ ಅಲೆಕ್ಸಾ ಅಥವಾ ಝಿಗಿಯ ಧ್ವನಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಗ್ರಾಹಕರಿಗೇ ಅಮೆಜಾನ್‌ ನೀಡಲಿದೆ.

Advertisement

2014ರಲ್ಲಿ ಅಲೆಕ್ಸಾ ಮಾರುಕಟ್ಟೆಗೆ ಬಂದ ಬಳಿಕ ಅದು ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು. ಸರಿಯಾಗಿ 7 ವರ್ಷಗಳ ಬಳಿಕ ಪುರುಷ ಧ್ವನಿಯುಳ್ಳ ಸಹಾಯಕ ವ್ಯವಸ್ಥೆಯನ್ನು ಅಮೆಜಾನ್‌ ತಂದಿದೆ.

ಅಮೆಜಾನ್‌ ಅಲೆಕ್ಸಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹೆಣ್ಣು ಮಗುವಿಗೆ ಅಲೆಕ್ಸಾ ಎಂದೇ ಹೆಸರು ಇರಿಸಲಾಗಿತ್ತು.

ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?
– ಬಳಕೆದಾರರು ಧ್ವನಿ ಸಹಾಯಕ ವ್ಯವಸ್ಥೆ ಖರೀದಿಯ ಬಳಿಕ ಅಲೆಕ್ಸಾ ಅಥವಾ ಝಿಗಿ ನಡುವೆ ಆಯ್ಕೆ ಮಾಡಬಹುದು.
– ಅಮೆಜಾನ್‌ನ ಇಕೋದಲ್ಲಿ ಬಳಕೆದಾರರು ಧ್ವನಿಯನ್ನು ಬದಲಿಸಿ ಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗಿದೆ.
– ಅದಕ್ಕಾಗಿ “ಅಲೆಕ್ಸಾ, ನಿಮ್ಮ ಧ್ವನಿ ಬದಲಾಯಿಸಿ’ ಎಂದರೆ ಅದರಲ್ಲಿ ಪುರುಷ ಧ್ವನಿ ಬರುತ್ತದೆ
– ಝಿಗಿಯನ್ನು ಖರೀದಿಸಿದವರಿಗೆ ಕೂಡ “ಅಲೆಕ್ಸಾದಂತೆ ಧ್ವನಿ ಬದಲಾಯಿಸಿ’ ಎಂದರೆ ಸ್ತ್ರೀ ಧ್ವನಿಯನ್ನೂ ಕೇಳಬಹುದು.
– ಆ್ಯಪಲ್‌ ಮತ್ತು ಗೂಗಲ್‌ನಲ್ಲಿ ಕೂಡ ಇಂಥದ್ದೇ ಧ್ವನಿ ಬದಲಾಯಿಸುವ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ವಸ್ತುಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next