Advertisement

Alexa Movie Review; ಕ್ರೈಂ-ಥ್ರಿಲ್ಲರ್ ಅಲೆಕ್ಸಾ ಜರ್ನಿ!

11:39 AM Jan 28, 2024 | Team Udayavani |

ನಟಿ ಅದಿತಿ ಪ್ರಭುದೇವ ಮೊದಲ ಬಾರಿಗೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ಅಲೆಕ್ಸಾ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿದೆ.

Advertisement

ಇನ್ನು “ಅಲೆಕ್ಸಾ’ ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಸಿನಿಮಾದಲ್ಲಿ ಆಗಷ್ಟೇ ಮದುವೆಯಾಗಿ ಹನಿಮೂನ್‌ಗೆ ಹೋದ ನವ ದಂಪತಿ ಕೊಲೆಯಾಗುತ್ತಾರೆ. ಆ ನಿಗೂಢ ಕೊಲೆಯ ರಹಸ್ಯವನ್ನು ಬೇಧಿ ಸಲು ಪೊಲೀಸ್‌ ಅಧಿಕಾರಿ “ಅಲೆಕ್ಸಾ’ ತನಿಖೆಗೆ ಇಳಿಯುತ್ತಾಳೆ. ಹೀಗೆ “ಅಲೆಕ್ಸಾ’ ತನಿಖೆ ಶುರು ಮಾಡುತ್ತಿದ್ದಂತೆ, ನಿಗೂಢ ಕೊಲೆಯ ಹಿಂದಿನ ಒಂದೊಂದೆ ಎಳೆ ತೆರೆದುಕೊಳ್ಳಲು ಶುರುವಾಗುತ್ತದೆ. ಅಂತಿಮವಾಗಿ ಕೊಲೆ ಯಾದವರ ಹಿನ್ನೆ ಏನು? ಕೊಲೆ ಮಾಡಿದವರು ಯಾರು? ಯಾಕಾಗಿ ಕೊಲೆಯಾಯಿತು? ಎಂಬುದೇ ಸಿನಿಮಾದ ಕ್ಲೈಮ್ಯಾಕ್ಸ್‌. ಆ ಜೋಡಿ ಕೊಲೆಯ ಹಿಂದಿನ ರಹಸ್ಯ ಪತ್ತೆ ಮಾಡುವ ಕೌತುಕವನ್ನು ಕಣ್ತುಂಬಿಕೊಳ್ಳುವ ಕುತೂಹಲವಿದ್ದರೆ, ನೀವು ಕೂಡ “ಅಲೆಕ್ಸಾ’ ತನಿಖೆಯ ಕಡೆಗೆ ಥಿಯೇಟರ್‌ನತ್ತ ಮುಖ ಮಾಡಬಹುದು.

ಜೋಡಿ ಕೊಲೆಯ ತನಿಖೆ, ಪೊಲೀಸ್‌ ಅಧಿಕಾರಿಯ ತನಿಖೆ, ನಡುವೆ ಒಂದು ಪ್ರೇಮಕಥೆ, ಭ್ರಷ್ಟಾಚಾರ, ವಂಚನೆ ಹೀಗೆ ಎಲ್ಲವನ್ನೂ “ಅಲೆಕ್ಸಾ’ ಸಿನಿಮಾದಲ್ಲಿ ಸೇರಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕರು. “ಅಲೆಕ್ಸಾ’ ಪಾತ್ರವನ್ನು ಅದಿತಿ ಪ್ರಭುದೇವ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಟ ಪವನ್‌ ತೇಜ್‌ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮೇಘಶ್ರೀ, ಹನುಮಂತೇಗೌಡ, ಚಂದ್ರಕಲಾ ಮೋಹನ್‌ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

ಜಿಎಸ್‌ಕೆ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next