Advertisement

Alert Virus: ಝೀಕಾಗೆ ಶಿವಮೊಗ್ಗದ ವೃದ್ಧ ಸಾವು, ರಾಜ್ಯದ 9 ಮಂದಿಯಲ್ಲಿ ಸೋಂಕು 

11:10 PM Aug 19, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಝೀಕಾ ವೈರಸ್​ ಹಾವಳಿ ಹೆಚ್ಚುತ್ತಿದ್ದು,  ಹೆಮ್ಮಾರಿ ವೈರಸ್ ಗೆ ಶಿವಮೊಗ್ಗದಲ್ಲಿ 73 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಇದರಿಂದ ಝೀಕಾ ದಾಳಿಗೆ ರಾಜ್ಯದಲ್ಲಿ ಮೊದಲ ವ್ಯಕ್ತಿ ಬಲಿಯಾಗಿದ್ಧಾರೆ.

Advertisement

ಈ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಒಟ್ಟು 9 ಝೀಕಾ ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳಲ್ಲಿ 6 ಮಂದಿ ರಾಜಧಾನಿಯ ಜಿಗಣಿಯವರೇ ಇದ್ದು, ಮೂವರು ಶಿವಮೊಗ್ಗದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಕೂಡ ಸ್ಪಷ್ಟನೆ  ಪಡಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಝೀಕಾ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು 9 ಪ್ರಕರಣಗಳಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಇದ್ದಾರೆ. ಶಿವಮೊಗ್ಗ ಝೀಕಾ ಸೋಂಕಿತ ವ್ಯಕ್ತಿಯು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರಣ ಮೃತಪಟ್ಟಿದ್ದಾರೆ.  ಸೋಂಕು ಪತ್ತೆಯಾದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.

ಗರ್ಭಿಣಿಗೆ ಸೋಂಕು
ಝೀಕಾ ಸೋಂಕು ದೃಢಪಟ್ಟವರಲ್ಲಿ ಜಿಗಣಿಯ ಗರ್ಭಿಣಿಯೂ ಇದ್ದಾರೆ. ಈಗಾಗಲೇ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದರು.

ವಿದೇಶದಿಂದ ಬಂದವರಿಗೆ ಮಂಕಿ ಫಾಕ್ಸ್‌ ತಪಾಸಣೆ
ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಶೀಘ್ರ ಸಜ್ಜು
ವಿದೇಶಗಳಿಂದ ವಿಮಾನ ನಿಲ್ದಾಣ ಹಾಗೂ ಸಮುದ್ರದ ಬಂದರುಗಳ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆಯುವವರಲ್ಲಿ ಮಂಕಿ ಪಾಕ್ಸ್‌ ಲಕ್ಷಣಗಳಿದ್ದರೆ ತತ್‌ಕ್ಷಣವೇ ತಪಾಸಣೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಮೌಖಿಕ ಆದೇಶ ನೀಡಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ವಿಕಾಸಸೌಧದಲ್ಲಿ ಮಂಕಿ ಪಾಕ್ಸ್‌ ಸಂಬಂಧ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮಾತನಾಡಿ, ಮಂಕಿಪಾಕ್ಸ್‌ ಕುರಿತು ಕೇಂದ್ರದಿಂದ ನಿಗದಿತ ಮಾರ್ಗಸೂಚಿ ಬಂದಿಲ್ಲ. ರಾಜ್ಯ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಸಜ್ಜುಗೊಳಿಸಲಾಗುತ್ತದೆ ಎಂದರು. ಸೋಂಕು ಎದುರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗುತ್ತದೆ. ಜನರು ಭಯಪಡುವ ಅಗತ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next