ಸ್ಟೇಗಳಿಗೆ ಬರುವ ಪ್ರವಾಸಿಗರಿಗೆ ಕೊಠಡಿಗಳನ್ನು ನೀಡದಂತೆ
ಕೂದುವಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ವಿ .ಪ್ರಕಾಶ್
ಹೋ ಸ್ಟೇ ಮಾಲಿಕರಲ್ಲಿ ಮನವಿ ಮಾಡಿದರು.
Advertisement
ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಹೋಂಸ್ಟೇಗಳಲ್ಲಿ ತಾವೇ ಖುದ್ದಾಗಿ ತೆರಳಿ ಮತದಾನದ ಬಗ್ಗೆ
ಜಾಗೃತಿ ಮೂಡಿಸಿದ ಅವರು, ಮತದಾನ ಮಾಡದೆ ಬರುವ
ಪ್ರವಾಸಿಗರಿಗೆ ಹೋಂ ಸ್ಟೇ ಗಳಲ್ಲಿ ಕೊಠಡಿ ನೀಡಬಾರದು. ಪ್ರತಿಯೊಬ್ಬ ನಾಗರೀಕರು ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವಂತಾಗಬೇಕು ಎಂಬ ಕಾಳಜಿಯಿಂದ ಅವರು ಹೋ
ಸ್ಟೇಗಳಿಗೆ ತೆರಳಿ ಮಾಲೀಕರಲ್ಲಿ ಮನವಿ ಮಾಡಿದರು.
ದಿನಾಂಕ ಸೇರಿ ಮೂರು ದಿನ ಸರಣಿ ರಜೆಯಿದ್ದು ಸಾಕಷ್ಟು ಪ್ರವಾಸಿಗರು
ಹೊರ ಜಿಲ್ಲೆಗಳಿಂದ ಪ್ರವಾಸಕ್ಕೆ ಬರುತ್ತಾರೆ. ಮತದಾನ ಪ್ರತಿಯೊಬ್ಬ
ನಾಗರೀಕರ ಹಕ್ಕು. ಅದನ್ನು ತಪ್ಪದೆ ಚಲಾಯಿಸಬೇಕು ಎಂದರು. ನಮ್ಮ ಪ್ರತಿ ಮತವು ಅಮೂಲ್ಯವಾದದ್ದು. ಅದ್ದರಿಂದ
ಮತದಾನದ ಮತದಾನದ 2-3 ದಿನ ಮುಂಚಿತವಾಗಿ ಹೋ
ಸ್ಟೇಗಳನ್ನು ಬುಕ್ ಮಾಡುವವರಿಗೆ ಕೊಠಡಿಗಳನ್ನು ನೀಡಬೇಡಿ.
ಹೆಸರನ್ನು ನೊಂದಾಯಿಸಿಬೇಡಿ. ಮತದಾನ ಮಾಡಿ ಬರುವವರಿಗೆ
ಕೊಠಡಿಗಳನ್ನು ಕೊಡಿ. ದೇಶದ ಅಭಿವೃದ್ದಿಗೆ ನಾವು ಕೈ ಜೋಡಿಸೋಣ.
ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಈ ಬಗ್ಗೆ ಅರಿವು ಮೂಡಿಸಿ ಎಂದರು.