Advertisement
ನಾಲ್ಕನೇ ಹಂತದ ಲಾಕ್‌ಡೌನ್ ಘೋಷಣೆ ಮಾಡಿದರೂ ಸಹ ಜನರನ್ನು ಮನೆಯಿಂದ ಹೊರಬರದಂತೆ ತಡೆಯಲು ಸಾಧ್ಯವಾಗಿರಲಿಲ್ಲ. ಜನರನ್ನು ಮನೆಯಲ್ಲೇ ಇರುವಂತೆ ಮಾಡಲು ಎಲ್ಲಾ ರೀತಿಯ ತಂತ್ರಗಳನ್ನು ಸರಕಾರ ಮಾಡಿದರೂ ಜನರು ಸುಖಾ ಸುಮ್ಮನೆ ಮನೆಯಿಂದ ಹೊರಬರುತ್ತಿದ್ದು ಇವರನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿತ್ತು. ಕೆಲವರಿಗೆ ಲಾಠಿ ರುಚಿ ತೋರಿಸಿದರೆ, ಮತ್ತೆ ಕೆಲವರ ವಾಹನಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದರೂ ಸಹ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಚೆಕ್‌ಪೋಸ್ಟ್ ಗಳನ್ನು ಹಾಕಿ ವಾಹನಗಳ ತಪಾಸಣೆ ಮಾಡಲಾಗುತ್ತಿದ್ದರೂ ಜನರನ್ನು ನಿಯಂತ್ರಿಸಲು ಕಷ್ಟಪಡಬೇಕಿತ್ತು. ಆದರೆ ಮೂಡಿಗೆರೆ ವೈದ್ಯರಿಗೆ ಕೋವಿಡ್ ಪಾಸಿಟಿವ್ ಬಂದ ದಿನದಿಂದ ಜನರು ಸ್ವಯಂ ಬಂದಿಯಾಗಿದ್ದಾರೆ. ಜನರ ಓಡಾಟ ವಿರಳವಾಗುತ್ತಿದ್ದು ವಾಹನಗಳ ಓಡಾಟ ಕಡಿಮೆಯಾಗಿದೆ. ಬೆರಳೆಣಿಕೆಯ ಜನ ಮಾತ್ರ ಪಟ್ಟಣದಲ್ಲಿ ಕಂಡು ಬರುತ್ತಿದ್ದಾರೆ. Advertisement
ಕೋವಿಡ್ ಭೀತಿ; ಮನೆಯಿಂದ ಹೊರಬರಲು ಜನರ ಹಿಂದೇಟು
06:42 PM May 25, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.