Advertisement

ಮದ್ಯ ವ್ಯಸನಿಗಳಿಗೆ ಸಮಾಜದಲ್ಲಿ ಗೌರವ ಸಿಗಲ್ಲ

11:53 AM Jul 13, 2018 | Team Udayavani |

ಹುಣಸೂರು: ಕುಡಿತ ಮನುಷ್ಯನ ಜೀವನವನ್ನೇ ಹಾಳು ಮಾಡುವುದಲ್ಲದೆ, ಕುಟುಂಬವನ್ನೂ ಬೀದಿಪಾಲು ಮಾಡುತ್ತದೆ. ಈ ಬಗ್ಗೆ ಮಹಿಳೆಯರು ಎಚ್ಚರ ವಹಿಸುವಂತೆ ಜಿಪಂ ಸದಸ್ಯೆ ಸಾವಿತ್ರಿ ಹೇಳಿದರು. 

Advertisement

ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿಯಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ, ಸೆಲ್ಕೋ ಸೊಲಾರ್‌ಲೈಟ್‌, ರೋಟರಿ ಸಂಸ್ಥೆ, ಪ್ರಗತಿಬಂಧು-ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ 1219ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ರೋಟರಿ ಸಂಸ್ಥೆಯ ಅಸಿಸ್ಟೆಂಟ್‌ ಗವರ್ನರ್‌ ಧರ್ಮಾಪುರ ನಾರಾಯಣ್‌ ಮಾತನಾಡಿ, ಪರಿಸ್ಥಿತಿ ಒಮ್ಮೊಮ್ಮೆ ಕುಡಿತದ ದಾಸರನ್ನಾಗಿಸುತ್ತದೆ. ಇದನ್ನೇ ನೆಪವಾಗಿಟ್ಟುಕೊಳ್ಳದೆ ಸಮಾಜದಲ್ಲಿ ಗೌರವ ಸಿಗಬೇಕಿದ್ದಲ್ಲಿ ಎಂತಹ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಮದ್ಯವರ್ಜನ ಶಿಬಿರ ನಡೆಸುವುದು ಸುಲಭದ ಮಾತಲ್ಲ, ಇಂತಹ ಸತ್ಕಾರ್ಯಕ್ಕೆ ಸಮಾಜ, ಸಂಘ-ಸಂಸ್ಥೆಗಳು ನೆರವಾಗಬೇಕೆಂದು ಮನವಿ ಮಾಡಿದರು.

ಹಿರಿಕ್ಯಾತನಹಳ್ಳಿ ಗ್ರಾಪಂ ಅಧ್ಯಕ್ಷೆ ಶಿಲ್ಪ ಮಾತನಾಡಿ, ಮದ್ಯ ವ್ಯಸನಿಗಳಿಗೆ ಸಮಾಜದಲ್ಲಿ ಗೌರವ ಸಿಗಲ್ಲ, ಅನೇಕರು ಕುಡಿತದಿಂದಾಗಿಯೇ ಸಾವನ್ನಪ್ಪಿ ಕುಟುಂಬವನ್ನು ಅನಾಥರನ್ನಾಗಿಸಿ, ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಾರೆ, ಇದರಿಂದ ಹೊರಬರಲು ಕುಡಿತ ಬಿಡುವುದೇ ಜಾಣ್ಮೆ ಎಂದು ಹೇಳಿ, ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾಮಸ್ಥರು  ಹೆದರದೆ ಪೊಲೀಸರು-ಅಬಕಾರಿ ಇಲಾಖೆಗೆ ದೂರು ನೀಡಬೇಕೆಂದು ಕೋರಿದರು.

ರೋಟರಿ ಸಂಸ್ಥೆ ಅಧ್ಯಕ್ಷ ನರಹರಿ ಇಂತಹ ಸಮಾಜ ಮುಖೀ ಕಾರ್ಯಕ್ರಮಗಳಿಗೆ ರೋಟರಿ ಸಂಸ್ಥೆ ಸದಾ ನೆರವಾಗಲಿದೆ ಎಂದರು. ಬೆಳ್ತಂಗಡಿಯ ಜನ ಜಾಗೃತಿ ವೇದಿಕೆಯ ಗಣೇಶ್‌ ಆಚಾರ್ಯ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗಡೆಯವರ ಆಶಯದಂತೆ 1982ರಲ್ಲಿ ಆರಂಭಗೊಂಡ ಗ್ರಾಮೀಣಾಭಿವೃದ್ಧಿ ಯೋಜನೆ ಇಂದು ಕೇರಳದ ಕಾಸರಗೋಡು ಸೇರಿದಂತೆ 33 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು,

Advertisement

ಉಳಿತಾಯ, ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆ, ಪರಿಸರ ಪೂರಕ ಯೋಜನೆಗಳಿಗೆ ಆದ್ಯತೆ ನೀಡಿದ್ದು, ಸಮಾಜಕ್ಕೆ ಕಂಟಕವಾಗಿರುವ ಕುಡಿತ ಬಿಡಿಸಲು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮದ್ಯವರ್ಜನ ಶಿಬಿರಗಳಲ್ಲಿ 92 ಸಾವಿರಕ್ಕೂ ಹೆಚ್ಚು ಮಂದಿಯ ಮನ ಪರಿವರ್ತನೆಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ, ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ವಲಯ ಮೇಲ್ವಿಚಾರಕರಾದ ರಾಧಾಕೃಷ್ಣಭಟ್‌, ಭಾಸ್ಕರ್‌, ಸುಷ್ಮಾ ಮಾತನಾಡಿದರು. ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೈಸ್‌ಮಿಲ್‌ ಸ್ವಾಮಿಗೌಡ, ರೈತ ಸಂಘದ ಅಗ್ರಹಾರ ರಾಮೇಗೌಡ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next