Advertisement

Delhi Metro: ಮದ್ಯ ತರಲು ಅನುಮತಿ ನೀಡಿದ ದಿಲ್ಲಿ ಮೆಟ್ರೋ, ಆದರ ಷರತ್ತುಗಳು ಅನ್ವಯ

04:22 PM Jun 30, 2023 | Team Udayavani |

ಹೊಸದಿಲ್ಲಿ: ಸದಾ ಸುದ್ದಿಯಲ್ಲಿರುವ ದಿಲ್ಲಿ ಮೆಟ್ರೋ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಅದೆಂದರೆ ಇನ್ನು ದಿಲ್ಲಿ ಮೆಟ್ರೋದಲ್ಲಿ ಮದ್ಯಕ್ಕೆ ಅನುಮತಿಸಲಾಗಿದೆ.

Advertisement

ದಿಲ್ಲಿ ಮೆಟ್ರೋ ಶುಕ್ರವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಒಬ್ಬರು ಎರಡು ಬಾಟಲಿ ಸೀಲ್ಡ್ ಮದ್ಯವನ್ನು ಮೆಟ್ರೋದೊಳಗೆ ತರಬಹುದು ಎಂದು ಹೇಳಿದೆ.

ಟ್ವಿಟರ್ ಬಳಕೆದಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಅಧಿಕೃತ ಹ್ಯಾಂಡಲ್, “ದೆಹಲಿ ಮೆಟ್ರೋದಲ್ಲಿ 2 ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಅನುಮತಿಸಲಾಗಿದೆ” ಎಂದು ಟ್ವೀಟ್ ಮಾಡಿದೆ.

ಇತ್ತೀಚಿನವರೆಗೂ, ಏರ್ಪೋರ್ಟ್ ಎಕ್ಸ್‌ ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು.

“ಆದರೆ ತರುವಾಯ, ಸಿಐಎಸ್ಎಫ್ ಮತ್ತು ಡಿಎಂಆರ್ ಸಿ ಯ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಪಟ್ಟಿಯನ್ನು ಪರಿಶೀಲಿಸಿದೆ ಮತ್ತು ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ದೆಹಲಿ ಮೆಟ್ರೋದಲ್ಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್‌ ಲೈನ್ ನಲ್ಲಿನ ನಿಬಂಧನೆಗಳಿಗೆ ಸಮನಾಗಿ ಸಾಗಿಸಲು ಅನುಮತಿಸಲಾಗಿದೆ” ಎಂದು ಡಿಎಂಆರ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next