Advertisement

ಮಹಾರಾಷ್ಟ್ರದಲ್ಲಿ ಈವರೆಗೆ9.47 ಲಕ್ಷ ಮಂದಿಗೆ ಮದ್ಯ ಹೋಂ ಡೆಲಿವರಿ

07:57 AM Jun 07, 2020 | Suhan S |

ಮುಂಬಯಿ, ಜೂ. 6: ಲಾಕ್‌ಡೌನ್‌ ಸಂದರ್ಭ ಮೇ 15ರಿಂದ ಮಹಾರಾಷ್ಟ್ರಾದ್ಯಂತ 9 ಲಕ್ಷಕ್ಕೂ ಅಧಿಕ ಮಂದಿ ಹೋಂ ಡೆಲಿವರಿ ಆರ್ಡರ್ಗಳನ್ನು ಮಾಡಿದ್ದಾರೆ ಎಂದು ರಾಜ್ಯ ಅಬಕಾರಿ ಆಯುಕ್ತ ಕಾಂತಿಲಾಲ್‌ ಉಮಾಪ್‌ ಶುಕ್ರವಾರ ತಿಳಿಸಿದ್ದಾರೆ.

Advertisement

ಶುಕ್ರವಾರದಂದು ಮದ್ಯ ಪೂರೈಕೆಗೆ 59,498 ಮಂದಿ ಆರ್ಡರ್‌ ಮಾಡಿದ್ದು, ಈ ಪೈಕಿ 34,004 ಮಂದಿ ಮುಂಬಯಿಯವರಾಗಿದ್ದಾರೆ ಎಂದು ಉಮಾಪ್‌ ಮಾಹಿತಿ ನೀಡಿದ್ದಾರೆ. ಮೇ 15 ಮತ್ತು ಜೂ. 5ರ ನಡುವೆ ಒಟ್ಟು 9,47,859 ಜನರು ಮದ್ಯದ ಮನೆ ವಿತರಣಾ ಸೇವೆಯನ್ನು ಪಡೆದಿದ್ದಾರೆ. 1,20,547 ಜನರು ಆನ್‌ಲೈನ್‌ನಲ್ಲಿ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 1,10,763 ಅರ್ಜಿಗಳನ್ನು ಅನುಮೋದಿಸಲಾಗಿದೆ. ಅಬಕಾರಿ ಇಲಾಖೆ ಕಚೇರಿಗಳಲ್ಲಿಯೂ ಆಫ್ಲೈನ್‌ ಪರವಾನಿಗೆಗಳು ಲಭ್ಯವಿದ್ದು, ಒಂದು ವರ್ಷಕ್ಕೆ 100 ರೂ. ಮತ್ತು ಜೀವಮಾನದ ಪರವಾನಿಗೆ 1,000 ರೂ. ಆಗಿದೆ ಎಂದವರು ತಿಳಿಸಿದ್ದಾರೆ.

ಜೂ. 5ರಂದು ನಾವು ಮದ್ಯ ಕಳ್ಳಸಾಗಣೆಗಾಗಿ 77 ಪ್ರಕರಣಗಳನ್ನು ದಾಖಲಿಸಿದ್ದು 43 ಮಂದಿಯನ್ನು ಬಂಧಿಸಿದ್ದೇವೆ ಮತ್ತು 9.6 ಲಕ್ಷ ರೂ. ಮೌಲ್ಯದ ಅಕ್ರಮ ಸಂಗ್ರಹವನ್ನು ವಶಪಡಿಸಿಕೊಂಡಿದ್ದೇವೆ ಎಂದು ಉಮಾಪ್‌ ಹೇಳಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ಅನಂತರ ಈವರೆಗೆ 7,225 ಪ್ರಕರಣಗಳನ್ನು ದಾಖಲಾಗಿದ್ದು, 3,344 ಜನರನ್ನು ಬಂಧಿಸಲಾಗಿದೆ. ಅದೇ 622 ವಾಹನಗಳನ್ನು ಜಪ್ತಿ ಮಾಡಿ, 18.67 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next