Advertisement

ಒಲಿಂಪಿಕ್‌ ನಡೆಯುವ ಸ್ಥಳಗಳಲ್ಲಿ ಮದ್ಯ ನಿಷೇಧ

03:25 PM Jun 24, 2021 | Team Udayavani |

ಟೋಕ್ಯೊ: ಟೋಕ್ಯೊ ಒಲಿಂಪಿಕ್‌ಗೆ ಸರಿಯಾಗಿ ಒಂದು ತಿಂಗಳು ಬಾಕಿ ಇರುವಾಗಲೇ ಕ್ರೀಡಾಕೂಟ ನಡೆಯುವ ಪ್ರಮುಖ ಸ್ಥಳಗಳಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ತಜ್ಞರ ಸಲಹೆಯನ್ನು ಅನುಸರಿಸಿ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

Advertisement

“ಒಲಿಂಪಿಕ್‌ ಕ್ರೀಡೆಗಳು ನಡೆಯುವ ಟೋಕ್ಯೊ, ಒಸಾಕ ಮತ್ತಿತರ ಸ್ಥಳಗಳಲ್ಲಿ ಕ್ರೀಡಾಕೂಟ ಮುಗಿಯುವವರೆಗೆ ಮದ್ಯಸೇವನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಕೂಟದ ಸಂಘಟನಾ ಸಮಿತಿ ನಿರ್ಧರಿಸಿದೆ’ ಎಂದು ಟೋಕ್ಯೊ ಒಲಿಂಪಿಕ್‌ ಅಧ್ಯಕ್ಷ ಸೀಕೊ ಹಶಿಮೊಟೊ ತಿಳಿಸಿದ್ದಾರೆ.

ಗಾಲ್ಫರ್‌ ಅನಿರ್ಬನ್‌ ಲಾಹಿರಿಗೆ ಅವಕಾಶ: ಭಾರತದ ಖ್ಯಾತ ಗಾಲ್ಫರ್‌ ಅನಿರ್ಬನ್‌ ಲಾಹಿರಿ ಮಂಗಳವಾರ ಅಚ್ಚರಿಯೆಂಬಂತೆ ಟೋಕ್ಯೊ ಒಲಿಂಪಿಕ್‌ ಅರ್ಹತೆ ಗಳಿಸಿದ್ದಾರೆ. ಈ ಆಯ್ಕೆಯನ್ನು ತಾನೇ ಸ್ವತಃ ನಿರೀಕ್ಷಿಸಿರಲಿಲ್ಲ ಎಂದು ಲಾಹಿರಿ ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ ಈ ವರ್ಷ ಅವರು ನೀಡಿದ ಕಳಪೆ ಪ್ರದರ್ಶನ.

ಅವರು ಟೋಕ್ಯೊದಲ್ಲಿ ಲಭ್ಯವಿದ್ದ60ನೇ ಸ್ಥಾನವನ್ನು ಪಡೆದರು. ಸದ್ಯ ಅದೊಂದೇ ಸ್ಥಾನ ಬಾಕಿಯಿತ್ತು. ಅಂತಾರಾಷ್ಟ್ರೀಯ ಗಾಲ್ಫ್ ಒಕ್ಕೂಟದ ಶ್ರೇಯಾಂಕದ ಆಧಾರದಲ್ಲಿ ಈ ಅವಕಾಶ ಅವರಿಗೆ ಲಭಿಸಿತು. ಇದರಿಂದ ಸಂತೋಷಗೊಂಡಿರುವ ಅವರು ಒಲಿಂಪಿಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತೀರ್ಮಾನ ಮಾಡಿದ್ದಾರೆ. ಸದ್ಯ ಅವರು ಒಲಿಂಪಿಕ್‌ ಮರೆತು ಪಿಜಿಎ ಕೂಟಕ್ಕೆ ಅಭ್ಯಾಸ ನಡೆಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next