Advertisement
ಲಾೖಲ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯ ವರ್ಜನದ ಚಿಕಿತ್ಸೆ ಪಡೆದ 164ನೇ ವಿಶೇಷ ಶಿಬಿರದ 79 ಮಂದಿ ಶಿಬಿರಾರ್ಥಿ ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ಡಾ| ಹೆಗ್ಗಡೆ ವಿಶ್ವಕ್ಕೆ ಮಾದರಿಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಹನುಮ ನರಸಯ್ಯ ಮಾತನಾಡಿ, ಮದ್ಯವರ್ಜನ ಶಿಬಿರಗಳ ಮೂಲಕ ರಾಜ್ಯವ್ಯಾಪಿ ಅತೀ ಹೆಚ್ಚು ವ್ಯಸನಿಗಳನ್ನು ಗುರುತಿಸಿ ಅವರನ್ನು ಸರಿದಾರಿಗೆ ತರುವಲ್ಲಿ ಪ್ರಯತ್ನಿಸುತ್ತಿರುವ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಯತ್ನ ಅನುಕರಣೀಯ ವಾಗಿದೆ. ಮಠ ಮಂದಿರಗಳ ಮೂಲಕ ಜಾಗೃತಿ ಕಾರ್ಯಗಳು ಹೆಚ್ಚು ಹೆಚ್ಚು ನಡೆದಾಗ ಅವುಗಳನ್ನು ಯಶಸ್ವಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು. ನಿವೃತ್ತ ನೋಂದವಣಾಧಿಕಾರಿ ರಂಗಸ್ವಾಮಿ, ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್, ಗಾಂಧಿ ಭವನ ಬೆಂಗಳೂರಿನ ನಂದೀಶ್, ಪುತ್ತೂರಿನ ಜಗದೀಶ್ ನೆಲ್ಲಿಕಟ್ಟೆ, ಕಾಟಿಪಳ್ಳದ ಮೈಮುನಾ ಫೌಂಡೇಶನ್ ಅಧ್ಯಕ್ಷ ಆಸಿಫ್, ಬೆಳ್ತಂಗಡಿಯ ಸಮಾಜಸೇವಕ ಜಲೀಲ್ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾçಸ್ ಶಿಬಿರದ ನೇತೃತ್ವ ವಹಿಸಿದ್ದು, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ನಾಗರಾಜ್, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿದ್ದಾರೆ. ನ. 22: ವಿಶೇಷ ಶಿಬಿರ
ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಮುಂದಿನ ವಿಶೇಷ ಶಿಬಿರವು ನ. 22ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.