Advertisement

Cincinnati Masters: ಇಗಾ ಸ್ವಿಯಾಟೆಕ್‌, ಕಾರ್ಲೋಸ್‌ ಅಲ್ಕರಾಜ್‌ಗೆ ಅಗ್ರ ಶ್ರೇಯಾಂಕ

11:45 PM Aug 08, 2023 | Team Udayavani |

ಸಿನ್ಸಿನಾಟಿ: ಮುಂದಿನ ವಾರದ “ಸಿನ್ಸಿನಾಟಿ ಮಾಸ್ಟರ್’ ಟೆನಿಸ್‌ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರರಾದ ಕಾರ್ಲೋಸ್‌ ಅಲ್ಕರಾಜ್‌ ಮತ್ತು ಇಗಾ ಸ್ವಿಯಾಟೆಕ್‌ ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ.

Advertisement

ನೊವಾಕ್‌ ಜೊಕೋವಿಕ್‌ ಕೂಡ ಸ್ಪರ್ಧಿಸಲಿದ್ದು, ಅವರಿಗೆ ದ್ವಿತೀಯ ಶ್ರೇಯಾಂಕ ಲಭಿಸಿದೆ. ಸಿನ್ಸಿನಾಟಿಯಲ್ಲಿ ಅವರು 2 ಸಲ ಪ್ರಶಸ್ತಿ ಜಯಿಸಿದ್ದು, 5 ಸಲ ರನ್ನರ್ ಅಪ್‌ ಆಗಿದ್ದಾರೆ. 2019ರ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ ಅವರದು ತೃತೀಯ ಶ್ರೇಯಾಂಕ.

ವನಿತಾ ವಿಭಾಗದ ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿ ಯನ್‌ ಅರಿನಾ ಸಬಲೆಂಕಾ 2ನೇ, ಅಮೆರಿಕದ ಜೆಸ್ಸಿ ಪೆಗುಲಾ 3ನೇ, ಕಜಕಸ್ಥಾನದ ಎಲೆನಾ ರಿಬಾಕಿನಾ 4ನೇ, ಟ್ಯುನೀಶಿಯಾದ ಓನ್ಸ್‌ ಜೆಬ್ಯೂರ್‌ 5ನೇ ಶ್ರೇಯಾಂಕ ಪಡೆದಿದ್ದಾರೆ.

ಪುರುಷರ ಹಾಗೂ ವನಿತಾ ವಿಭಾಗದ ಅಗ್ರ ಆಟಗಾರರಿಗೆ ಸಿನ್ಸಿನಾಟಿ ಶ್ರೇಯಾಂಕ ನೀಡಲಾಗಿದೆ. ಇವರಲ್ಲಿ ಅಗ್ರ 8 ಆಟಗಾರರು ದ್ವಿತೀಯ ಸುತ್ತಿಗೆ ನೇರ ಬೈ ಪಡೆಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next