Advertisement

ಅರ್ಜಂಟೈನಾ ಚುನಾವಣೆ: ಅಲ್ಬರ್ಟೋ ಫೆರ್ನಾಂಡಿಸ್ ನೂತನ ಅಧ್ಯಕ್ಷ

09:47 AM Oct 29, 2019 | keerthan |

ಬ್ಯೂನಸ್ ಐರಿಸ್: ಅರ್ಜೆಂಟೈನಾದ ವಿರೋಧ ಪಕ್ಷದ ನಾಯಕನಾಗಿದ್ದ ಅಲ್ಬರ್ಟೋ ಫೆರ್ನಾಂಡಿಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮೌರಿಕೋ ಮಕ್ರಿಯವರನ್ನು ಸೋಲಿಸಿ ಅಲ್ಬರ್ಟೋ ನೂತನ ಅಧ್ಯಕ್ಷ ಗಾದಿಗೇರಿದ್ದಾರೆ.

Advertisement

ಈವರೆಗೆ 71.6 ಶೇಕಡಾ ಮತಎಣಿಕೆ ಮುಗಿದಿದ್ದು, ಫೆರ್ನಾಂಡಿಸ್ 47.2 ಶೇಕಡಾ ಮತ ಪಡೆದಿದ್ದಾರೆ. ಪ್ರತಿಸ್ಪರ್ಧಿ ಮಕ್ರಿ 41.34 ಶೇಕಡಾ ಮತ ಪಡೆದಿದ್ದಾರೆ ಎಂದು ಅಲ್ಲಿನ ಚುನಾವಣಾ ಆಯೋಗ ಪ್ರಕಟ ಮಾಡಿದೆ.

ಸ್ಥಳಿಯ ನಿಯಮದ ಪ್ರಕಾರ 45 ಶೇಕಡಾಕ್ಕಿಂತ ಹೆಚ್ಚು ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ.

ರವಿವಾರವಷ್ಟೇ ಅರ್ಜಂಟೈನಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಆರು ಅಭ್ಯರ್ಥಿಗಳು ಕಣದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next