Advertisement
ತೋಟಗಾರಿಕೆ ಇಲಾಖೆ ಅಂದಾಜಿಸಿದಂತೆ ಕಲ್ಲಂಗಡಿಯನ್ನು ಸುಮಾರು 400 ಎಕರೆಯಲ್ಲಿ ಬೆಳೆಯಲಾಗಿದೆ. ಈ ಪೈಕಿ 150 ಎಕರೆ ಮಾರಾಟ ಮಾಡಿದ್ದು, ಇನ್ನೂ 100 ಎಕರೆ ಸದ್ಯ ಕಟಾವು ಆಗಬೇಕು. ಬೆಲೆ ಇಲ್ಲದ್ದಕ್ಕೆ ನಷ್ಟವಾಗುತ್ತಿದೆ. ಇನ್ನುಳಿದ ಕಲ್ಲಂಗಡಿ ಎರಡು ವಾರದಲ್ಲಿ ಕಟಾವಿಗೆ ಬರಲಿದೆ. 100 ಎಕರೆಯಲ್ಲಿ ಅಂದಾಜು ಎರಡು ಸಾವಿರ ಟನ್ ಕಲ್ಲಂಗಡಿ ಉತ್ಪಾದನೆ ಆಗಲಿದ್ದು, ಸದ್ಯ ಇಲ್ಲಿನಮಾರುಕಟ್ಟೆಯಲ್ಲಿ ಎರಡೂವರೆಯಿಂದ 4ರೂ.ಗೆ ಒಂದರಂತೆ ಮಾರಾಟವಾಗುತ್ತಿದೆ. ಹೀಗೆ ಒಂದು ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಕುಂಬಳಕಾಯಿಯನ್ನು ಮುಂಬೈ ಮಾರುಕಟ್ಟೆ ಬಿಟ್ಟರೆ ಬೇರೆ ಎಲ್ಲೂ ಖರೀದಿಸುತ್ತಿಲ್ಲ. ಹೀಗಾಗಿ 25 ಎಕರೆಯಲ್ಲಿ ಕುಂಬಳಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಪಪ್ಪಾಯಿ 100 ಎಕರೆಯಲ್ಲಿ ಅರ್ಧ ಇಳುವರಿ ಕೈ ಸೇರಿದೆ. ಸದ್ಯ ಕಟಾವಿಗೆ ಬಂದ ಫಲಕ್ಕೆ ಬೆಲೆಯಿಲ್ಲವಾಗಿದೆ. ಟೊಮ್ಯಾಟೊ 80 ಎಕರೆ, ಬದನೆ 25 ಎಕರೆಯಲ್ಲಿ ಬೆಳೆಯಲಾಗಿದೆ. ಇದೆಲ್ಲ ಬೆಳೆ ವಾಣಿಜ್ಯ ನಗರಿ ಮುಂಬೈ ಹಾಗೂ ಹೈದ್ರಾಬಾದ್‌ಗೆ ಸಾಗಾಟವಾಗಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಅಲ್ಲಿನ ಮಾರುಕಟ್ಟೆಗಳು ಮುಚ್ಚಿವೆ. ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ದೊರಕದೆ ರೈತರು ಸಂಕಷ್ಟ ಅನುಭವಿಸುವಂತೆ ಆಗಿದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ರೈತರಿಂದ ಅಗ್ಗದ ದರದಲ್ಲಿ ತರಕಾರಿ ಖರೀದಿಸುವ ವ್ಯಾಪಾರಿಗಳು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾಟ ಮಾಡುತ್ತಿದ್ದಾರೆ. ಆದರೆ ರೈತನಿಗೆ ಮಾತ್ರ ಲಾಭ ದೊರಕುತ್ತಿಲ್ಲ.