Advertisement

ವಾಗ್ದ ರಿ: ನೀರಿಗೆ ಹಾಹಾಕಾರ

04:06 PM Apr 18, 2020 | Naveen |

ಆಳಂದ: ಕೊರೊನಾ ವೈರಸ್‌ ಭೀತಿ ನಡುವೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ತಾಲೂಕಿನ ಕಮಲಾನಗರ ಗ್ರಾ.ಪಂ ವ್ಯಾಪ್ತಿಯ ವಾಗ್ದರಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪ್ರತಿ ಬೇಸಿಗೆಯಲ್ಲಿಯೂ ಇದೇ ಸಮಸ್ಯೆ ಮರುಕಳಿಸುತ್ತದೆ. ಆದರೂ ಸಂಬಂಧಪಟ್ಟವರು ಶಾಶ್ವತ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಗೆ ಕಳೆದ 10 ದಿನಗಳಿಂದ ಜನರಿಗೆ ನೀರು ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ಜನ ಮತ್ತು ಜಾನುವಾರುಗಳು ಪರಿತಪಿಸುವಂತೆ ಆಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಗ್ರಾಮದಲ್ಲಿ ತೆರೆದ ಬಾವಿ ಹಾಗೂ ಕೊಳವೆ ಬಾವಿ ಮೂಲಕ ಜನರು ನೀರು ಪಡೆಯುತ್ತಿದ್ದರು. ಆದರೀಗ ಅವುಗಳು ಬತ್ತಿ ಹೋಗಿವೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಗ್ರಾ.ಪಂ ಅಭಿವೃದ್ಧಿ ಅಧಿ ಕಾರಿ ಚಂದ್ರಕಲಾ ಅವರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ಸಂತೋಷ ವಾಗªರೆ ಆರೋಪಿಸಿದ್ದಾರೆ. ಮನೆಗಳಲ್ಲಿ ನಳದ ವ್ಯವಸ್ಥೆ ಇಲ್ಲ. ಇದ್ದರೂ ಸಾರ್ವಜನಿಕ ಗ್ರಾಮದಲ್ಲಿ ಎರಡು ಟ್ಯಾಂಕ್‌ಗಳಿದ್ದವು. ಅವುಗಳಿಗೆ ಕಳೆದ 15 ದಿನಗಳಿಂದ ನೀರು ಬರುತ್ತಿಲ್ಲ. ಸಂಬಂಧಿ ತ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ನೀರಿನ ವ್ಯವಸ್ಥೆ ಕೈಗೊಳ್ಳದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next