Advertisement

ತಡಕಲ್ ಮೂರೂ ಕೆರೆ ಭರ್ತಿ

09:54 AM Jul 22, 2019 | Naveen |

ಆಳಂದ: ಕಳೆದೊಂದು ತಿಂಗಳಿಂದ ಮಳೆ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಸಮಾಧಾನಕರ ಮಳೆಯಿಂದ ಕೃಷಿ ಚಟುವಟಿಕೆಗೆ ವರವಾಗಿ ಪರಿಣಮಿಸಿದೆ.

Advertisement

ಜೂನ್‌ ಆರಂಭದಲ್ಲಿ ಶೇ. 66ರಷ್ಟು ಬಿತ್ತನೆ ಕೈಗೊಂಡ ಬೆಳೆಗಳು ಈಗಾಗಲೇ ಒಂದಿಷ್ಟು ನೆಲಕ್ಕಿಚ್ಚಿದರೆ ಕೆಲವೊಂದಿಷ್ಟು ನಾಟಿ ಬೆಳವಣಿಗೆಗೆೆ ಈ ಮಳೆ ವರವಾಗಿ ಪರಿಣಮಿಸಿದೆ.

ಈಗಾಗಲೇ ಮುಂಗಾರು ಹಂಗಾಮಿನ ಬಾಕಿ ಇರುವ ಬಿತ್ತನೆಯ ಶೇ 30ರಷ್ಟು ಪ್ರದೇಶಕ್ಕೆ ಮಳೆಯಿಂದ ಬಿತ್ತನೆ ಆರಂಭಕ್ಕೆ ಹದವಾಗಿ ಪರಿಣಮಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಒಣ ಬೇಸಾಯವನ್ನೇ ಅವಲಂಬಿಸಿದ ಈ ಭಾಗದಲ್ಲಿ ತೊಗರಿ, ಉದ್ದು, ಹೆಸರು, ಸೋಯಾಬೀನ್‌, ಮೇಕ್ಕೆಜೋಳ, ಸಜ್ಜೆ ಹೀಗೆ ಇನ್ನಿತರ ಬೀಜದ ಬಿತ್ತನೆ ಕೈಗೊಂಡಿದ್ದಾರೆ. ಶನಿವಾರ ಸುರಿದ ಮಳೆ ರೈತರ ಮುಖದಲ್ಲಿ ನಗು ಚಿಮ್ಮಿಸುವ ಮೂಲಕ ಕೃಷಿ ಕಾರ್ಯಕ್ಕೆ ಒಂದಿಷ್ಟು ಭರವಸೆ ಮೂಡಿಸಿದೆ ಎನ್ನುತ್ತಾರೆ ರೈತರು.

ಬಿತ್ತನೆಗೆ ಅನುಕೂಲ: ಮಳೆಯಿಲ್ಲದೆ ಇದುವರೆಗೂ ಬಿತ್ತನೆ ನಡೆಯದೆ ಇದ್ದ ಮುನ್ನೊಳ್ಳಿ, ತಡಕಲ್, ತಂಬಾಕವಾಡಿ, ದೇಗಾಂವ, ಸಂಗೋಳಗಿ, ಬೆಳಮಗಿ ಅರ್ಧ ಭಾಗ, ರುದ್ರವಾಡಿ, ಜಮಗಾ, ಕಮಲಾನಗರ ಬಿತ್ತನೆ ಆಗಿರಲಿಲ್ಲ. ವಿ.ಕೆ. ಸಲಹರನಲ್ಲಿ ಅರ್ಧಮರ್ಧ ಬಿತ್ತನೆಯಾಗಿದೆ. ಈ ಮಳೆಯಿಂದ ಈಗ ಬಿತ್ತನೆ ಆರಂಭಕ್ಕೆ ಹದವಾಗಿದೆ ಎಂದು ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

ಕೆರೆಗಳಿಗೆ ನೀರು: ಸಾಲೇಗಾಂವ, ಆಳಂದ ಕೆರೆಗೆ ಹೊಸ ನೀರಿನ ಹರಿವಾಗಿದೆ. ತಡಕಲ್ ಗ್ರಾಮದ ಹೊರವಲಯದ ಮೂರು ಕೆರೆಗಳು ಪೂರ್ಣ ಭರ್ತಿಯಾಗಿ ಹೆಚ್ಚುವರಿ ನೀರು ಹರಿದಿವೆ. ಚೆಕ್‌ ಡ್ಯಾಂ ಭರ್ತಿ, ಹೊಲದ ಅರಣಿ ಹಾನಿಯಾಗಿವೆ. ಎರಡ್ಮೂರು ತೆರೆದ ಬಾವಿ ಮುಚ್ಚಿಹೋಗಿವೆ. ಮೊರಾರ್ಜಿ ಶಾಲೆ ಹತ್ತಿರದ ಕೆರೆ ನೀರಿನ ಬುಗ್ಗೆ ಎದ್ದಿದ್ದರಿಂದ ನೀರಿನ ಹರಿವು ತಡೆಯಲು ಗ್ರಾಪಂ ಕಾರ್ಯಾಚರಣೆ ಆರಂಭಿಸಿದೆ.

Advertisement

ಕಿಣ್ಣಿಸುಲ್ತಾನ ಹತ್ತಿರದಲ್ಲಿ ಸಿರಪುರ ಮಾದರಿಯ ಕೆಲಸದಲ್ಲಿ ನೀರು ನಿಂತುಕೊಂಡಿವೆ. ಖಜೂರಿ ಜಿನುಗು ಕೆರೆಗೆ ಕೊಂಚ ನೀರು ಬಂದಿವೆ.

ಭೇಟಿ: ಮಧ್ಯ ಭಾಗದಲ್ಲಿ ರಂದ್ರಕಾಣಿಸಿಕೊಂಡು ಆತಂಕ ಮೂಡಿಸಿರುವ ತಡಕಲ್ ಕೆರೆಗೆ ಮತ್ತು ಕಿಣ್ಣಿಸುಲ್ತಾನ ಸಿರಪುರ ಮಾದರಿ ಕಾಮಗಾರಿ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಎಇಇ ಎಸ್‌.ಎಸ್‌. ಜಾಧವ, ಎಂಜಿನಿಯರ್‌ ಆನಂದ ಅವರು ರವಿವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಳೆ ಪ್ರಮಾಣ: ಮಳೆ ಮಾಪನ ಕೇಂದ್ರಗಳಾದ ಆಳಂದ 16.2 ಮಿ.ಮೀ, ಖಜೂರಿ 20.0. ಮಿ.ಮೀ, ನರೋಣಾ 12.0 ಮಿ.ಮೀ, ನಿಂಬರಗಾ 9. ಮಾದನಹಿಪ್ಪರಗಾ 23 ಮಿ.ಮೀ, ಸರಸಂಬಾ 9 ಮಿ.ಮೀ, ಕೋರಳ್ಳಿ 15 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ನೆಮ್ಮದಿ ತಂದಿದೆ: ಮಳೆಗಾಗಿ ನಿತ್ಯ ದೇವರಿಗೆ ಬೇಡಿಕೊಳ್ಳುತ್ತಿದ್ದೆವು. ಮಳೆ ಬಂದರೆ ನಮ್ಮ ಹತ್ತಿರ ಯಾರೂ ಬರುವುದಿಲ್ಲ. ಮೇವು, ಕುಡಿಯುವ ನೀರಿನ ಚಿಂತೆಯಾಗಿದೆ. ಮಳೆಯಿಂದ ಈ ಸಮಸ್ಯೆ ದೂರವಾಗಲಿ. ಶನಿವಾರ ಸುರಿದ ಮಳೆ ಸಮಾಧಾನ ತಂದಿದೆ ಎಂದು ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next