ಪರಿಸ್ಥಿತಿ ಹೀಗೆ ಮುಂದುವರಿದರೇ ಮುಂದೇನು ಗತಿ ಎನ್ನುವಂತಾಗಿದೆ.
Advertisement
ಅತಿರಥ-ಮಹಾರಥರು ನೀರಿಗಾಗಿ ಕೊಡಗಳನ್ನು ಹಿಡಿದು ಬೀದಿಗಳಲ್ಲಿ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಇದಕ್ಕೆ ಹೊರತಲ್ಲ ಎನ್ನುವಂತೆ ಮಹಿಳೆಯರು, ಮಕ್ಕಳು ದಿನವಿಡಿ ನೀರು ತರವಲ್ಲೇ ದಿನದೊಡುವ ಪರಿಸ್ಥಿತಿ ಕಂಡು ಬರುತ್ತಿದೆ.
Related Articles
Advertisement
ಸಮಸ್ಯೆ ಇರುವ 43 ಗ್ರಾಮಗಳ ಪೈಕಿ 31 ಗ್ರಾಮಗಳಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್ ಬೇಡಿಕೆಯ 28 ಹಳ್ಳಿಗಳ ಪೈಕಿ 22 ಹಳ್ಳಿಗಳಲ್ಲಿ ನೀರು ಪೂರೈಕೆ ಕಾರ್ಯ ನಡೆದಿದೆ. ಅಗತ್ಯವಾಗಿರುವ 52 ಟ್ಯಾಂಕರ್ ಪೈಕಿ 44 ಟ್ಯಾಂಕರ್ ಬಳಸಿ ಪ್ರತಿದಿನ ಬೇಡಿಕೆಯ 159 ಟ್ರಿಪ್ ಪೈಕಿ 135 ಟ್ರಿಪ್ ನೀರು ಒದಗಿಸಲಾಗುತ್ತಿದೆ.
ಖಾಸಗಿ ನೀರು ಖರೀದಿ: 17 ಗ್ರಾಮದ ಬೇಡಿಕೆ ಪೈಕಿ 11 ಕಡೆ ಬಾಡಿಗೆ ಆಧಾರದ ಮೇಲೆ ನೀರು ಒದಗಿಸಲಾಗುತ್ತಿದೆ. ಇನ್ನು 22 ಖಾಸಗಿ ನೀರು ಪಡೆಯುವ ಯೋಜನೆಯಲ್ಲಿ 16 ಕಡೆ ಜಲಮೂಲಗಳಿಂದ ನೀರು ಪಡೆದು ಟ್ಯಾಂಕರ್‌ನಿಂದ ಒದಗಿಸಲಾಗುತ್ತಿದೆ. ಹೊಸದಾಗಿ ಮಾಡಿಯಾಳ, ಹಡಲಗಿ, ಚಿಂಚೋಳಿ, ಮಮದಾಪುರ ತಾಂಡಾ, ಬೋಳಣಿ, ಮುನ್ನೊಳ್ಳಿ, ಸಂಗೋಳಗಿ ಬಿ. ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್ ನೀರಿನ ಬೇಡಿಕೆಯಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಗಮನಕ್ಕೆ ತರಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಸಂಗಮೇಶ ಬಿರಾದಾರ ತಿಳಿಸಿದ್ದಾರೆ. ಹೋರಾಟದ ಎಚ್ಚರಿಕೆ
ಪಟ್ಟಣದಲ್ಲಿ ಮೂರ್‍ನಾಲ್ಕು ದಿನಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ, ಹಲವಾರು ವರ್ಷಗಳಿಂದ ಕಲುಷಿತ ನೀರು ಸೇವಿಸಿ ಅನೇಕ ನಾಗರಿಕರು ಅನಾರೋಗ್ಯಕ್ಕೆ ತುತ್ತಾದ ಉದಾಹರಣೆಗಳಿವೆ. ನೀರು ಶುದ್ಧೀಕರಿಸಿ
ಪೂರೈಸದೇ ಇದ್ದಲ್ಲಿ ನಾಗರಿಕರೊಂದಿಗೆ ಹೋರಾಟ ಕೈಗೊಳ್ಳಲಾಗುವುದು ಎಂದು ಯುವ ಕಾರ್ಯಕರ್ತ ದೌಲಪ್ಪ ವಣದೆ ಎಚ್ಚರಿಸಿದ್ದಾರೆ. ಮಹಾದೇವ ವಡಗಾಂವ