Advertisement

ಪರಮೇಶ್ವರ ದೇವರ ಜಾತ್ರೆ ರದ್ದು

03:08 PM Apr 24, 2020 | Naveen |

ಆಳಂದ: ಕೋವಿಡ್ ವೈರಸ್‌ ಹರಡದಂತೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ವಿಧಿಸಿದ ಲಾಕ್‌ಡೌನ್‌ ಪಾಲನೆ ಹಿನ್ನೆಲೆಯಲ್ಲಿ ತಾಲೂಕಿನ ಮೋಘಾ ಕೆ. ಗ್ರಾಪಂ ಆಡಳಿತವು ಗ್ರಾಮದ ಪರಮೇಶ್ವರ ದೇವರ ಜಾತ್ರೆ ರದ್ದುಪಡಿಸಿದ್ದಲ್ಲದೆ ದೇವಸ್ಥಾನದ ರಥಕ್ಕೆ ಬೀಗ ಹಾಕಿದ ಘಟನೆ ವರದಿಯಾಗಿದೆ.

Advertisement

ಗ್ರಾಮಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸಿಪಿಐ ಶಿವಾನಂದ ಗಾಣಿಗೇರ ಭೇಟಿ ನೀಡಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಾತ್ರೆ ರದ್ದುಪಡಿಸಬೇಕು ಎಂದು ಮನವೊಲಿಕೆಯಿಂದಾಗಿ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. ಜಾತ್ರೆ ಮತ್ತು ರಥೋತ್ಸವ ಗುರುವಾರ ನಡೆಯಬೇಕಾಗಿತ್ತಾದರು, ಸ್ಥಳೀಯ ಗ್ರಾಪಂ ಆಡಳಿತವು ಎರಡು ದಿನ ಮೊದಲೇ ರಥಕ್ಕೆ ಬೀಗಹಾಕಿ ಮುಂಜಾಗ್ರತಾ ಕ್ರಮ ಅನುಸರಿಸಿ, ಜಾತ್ರೆ ಆಚರಿಸಿದಂತೆ ತಾಕೀತು ಮಾಡಿದೆ. ಅಲ್ಲದೆ, ಪರಸ್ಪರ ಅಂತರ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

ಗ್ರಾಪಂ ಅಧ್ಯಕ್ಷೆ ಇಟಾಬಾಯಿ ಚಂದಪ್ಪ ಪೋತೆ, ಪಿಡಿಒ ಮಂಜೂರ ಪಟೇಲ್‌, ಸದಸ್ಯ ಗುರಣ್ಣಾ ಕಾಬಡೆ, ಮುಖಂಡ ಗುಂಡಯ್ಯ ಸ್ವಾಮಿ, ದತ್ತಾಗೌಡ ಪಾಟೀಲ, ಗ್ರಾಪಂ ಕಾರ್ಯದರ್ಶಿ ಲಕ್ಷ್ಮಣ ಶಟಗಾರ, ಪಿಎಸ್‌ಐ ಇಂದು, ವಿಎ ಸುಭಾಷ ಪಾಟೀಲ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next