Advertisement

ಕೋವಿಡ್ ಪತ್ತೆ: ಅಗತ್ಯ ಕ್ರಮ ಕೈಗೊಳ್ಳಿ

04:31 PM Apr 23, 2020 | Naveen |

ಆಳಂದ: ಪಟ್ಟಣದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಸೋಂಕು ಹರಡುವುದನ್ನು ತಡೆಯಲು ಮುಂದಾಗಬೇಕು ಎಂದು ಶಾಸಕ ಸುಭಾಶ್‌ ಗುತ್ತೇದಾರ ತಾಲೂಕಾಡಳಿತಕ್ಕೆ ಸೂಚಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೋಂಕು ಪತ್ತೆಯಾಗಿರುವ ಪ್ರದೇಶದಲ್ಲಿ 1 ಕಿಮೀ ಅಂತರದಲ್ಲಿ ಸೀಲ್‌ಡೌನ್‌ ಕೈಗೊಳ್ಳಬೇಕು. ಜತೆಗೆ ಅದರ ಹಿಂದಿನ 1 ಕಿಮೀ ವ್ಯಾಪ್ತಿಯಲ್ಲಿ ಬಫರ್‌ಜೋನ್‌ ಅಳವಡಿಸಿಕೊಳ್ಳಲು ಹೇಳಿದರು. ಸೋಂಕು ಪತ್ತೆಯಾಗಿರುವ ವ್ಯಕ್ತಿಯು ವಾಸವಾಗಿದ್ದ ಇಡೀ ಪ್ರದೇಶದ ಜನರನ್ನು ತಪಾಸಣೆಗೆ ಒಳಪಡಿಸಿ, ಸ್ಕ್ರೀನಿಂಗ್‌ ಮಾಡಬೇಕು. ಆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳಗಳಲ್ಲಿ ಪುರಸಭೆ ವತಿಯಿಂದ ನಿಷೇಧಿತ ಪ್ರದೇಶವೆಂದು ಫ್ಲೆಕ್ಸ್‌ ಹಾಕಲು ಆದೇಶಿಸಿದರು.

ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ವಿನಾಕಾರಣ ಓಡಾಡಿದರೇ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ದಿನನಿತ್ಯದ ಉಪಜೀವನಕ್ಕೆ ಬೇಕಾಗುವ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಯವರು ಕಡ್ಡಾಯವಾಗಿ ಸ್ಯಾನಿಟೈಜರ್‌ ಬಳಸಿ, ಮಾಸ್ಕ್ ಗ್ಲೌಸ್‌ ಧರಿಸಿಕೊಂಡು ನಿಗದಿತ ಸಮಯಕ್ಕೆ ವ್ಯಾಪಾರ ಮಾಡಬೇಕು. ಗ್ರಾಹಕರು ಕೂಡಾ ಮಾಸ್ಕ್ ಧರಿಸಿಕೊಂಡೇ ಪದಾರ್ಥ ಖರೀದಿಸಬೇಕು ಎಂದರು.

ತಹಶೀಲ್ದಾರ್‌ ದಯಾನಂದ ಪಾಟೀಲ, ಇಒ ಸಂಜಯರೆಡ್ಡಿ, ಸಿಪಿಐ ಶಿವಾನಂದ ಗಾಣಿಗೇರ್‌, ಜೆಸ್ಕಾಂ ಎಇಇ, ಪುರಸಭೆ ಮುಖ್ಯಾಧಿ ಕಾರಿ, ಶಿರಸ್ತೇದಾರ, ಉಪ ತಹಶೀಲ್ದಾರರು ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next