Advertisement

ಮಾಗಿ ಉಳುಮೆ: ಬಿತ್ತನೆಗೆ ಸಜ್ಜಾದ ರೈತ

11:00 AM May 31, 2019 | Team Udayavani |

ಆಳಂದ: ಬೇಸಿಗೆಯ ವಿಪರೀತ ಬಿಸಿಲು ಇನ್ನೂ ಮುಗಿದಿಲ್ಲ. ಈ ನಡುವೆ ಮಳೆ ನಿರೀಕ್ಷೆಯಲ್ಲಿ ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗಿ ಕುಳಿತಿದ್ದಾರೆ.

Advertisement

ಬೇಸಿಗೆಯಲ್ಲಿ ಮಾಗಿ ಉಳುಮೆ ಕೈಗೊಂಡು ಭೂಮಿ ಹದಗೊಳಿಸುವ ಮೂಲಕ ಸಕಾಲಕ್ಕೆ ಮಳೆ ಬಂದರೆ ಬಿತ್ತನೆ ಕೈಗೊಳ್ಳಬೇಕೆಂದು ಅಗತ್ಯ ಬೀಜ, ಗೊಬ್ಬರ ಖರೀದಿಸಲು ಚಿಂತನೆ ನಡೆಸಿದ್ದಾರೆ.

ಮೂರು ತಿಂಗಳ ಕಾಲ ಕುಡಿಯುವ ನೀರಿನ ತಾಪತ್ರಯ, ಬೇಸಿಗೆ ಬಿಸಲಿಗೆ ಬಸವಳಿದ ಜನ-ಜಾನುವಾರುಗಳಿಗೆ ಮೇ ತಿಂಗಳಲ್ಲಿ ಬೀಳುತ್ತಿದ್ದ ಅಕಾಲಿಕ ಮಳೆ ಬಾರದಿರುವುದರಿಂದ ರೈತ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ಇನ್ನೇನು ಬೇಸಿಗೆ ಮುಗಿಯುವ ಹಂತಕ್ಕೆ ಬಂದಿದ್ದು, ಜೂನ್‌ ತಿಂಗಳ ಆರಂಭದಲ್ಲಾದರೂ ಮಳೆ ಸುರಿದರೆ ಬಿತ್ತನೆ ಕೈಗೊಳ್ಳಬೇಕು ಎಂದು ವರುಣನಲ್ಲಿ ಪ್ರಾರ್ಥಿಸತೊಡಗಿದ್ದಾರೆ.

ಸಕಾಲಕ್ಕೆ ಮಳೆ ಸುರಿದು ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ಬಾರಿ ಕೃಷಿ ಇಲಾಖೆ ಅಂದಾಜಿನಂತೆ ತಾಲೂಕಿನ ಐದು ಹೋಬಳಿಗೆ ಸಂಬಂಧಿಸಿದಂತೆ ಒಟ್ಟು 131131 ಹೆಕ್ಟೇರ್‌ ಪ್ರದೇಶದಲ್ಲಿ 595760 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

ತೃಣಧಾನ್ಯ: ನಿರೀಕ್ಷೆಯಂತೆ ಹೆಚ್ಚುವರಿ ಮಳೆಯಾದರೆ ಭತ್ತ ಖುಷ್ಕಿ 3750 ಟನ್‌, ನೀರಾವರಿ 10 ಹೆಕ್ಟೇರ್‌ 52 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿಯಿದೆ. ಜೋಳ (ಖುಷ್ಕಿ) 500 ಹೆಕ್ಟೇರ್‌ 750 ಟನ್‌, ನೀರಾವರಿ ಕ್ಷೇತ್ರ ಗುರಿಯಿಲ್ಲ. ಆದರೆ ನಿರೀಕ್ಷಿತ 1740 ಟನ್‌ ಉತ್ಪಾದನೆ (ಮಳೆ ಮೇಲೆ ಅವಲಂಬಿತ), ಮೆಕ್ಕೆಜೋಳ (ಖುಷ್ಕಿ), 700 ಹೆಕ್ಟೇರ್‌ನಲ್ಲಿ 2450 ಟನ್‌ ಹಾಗೂ ನೀರಾವರಿ 400 ಹೆಕ್ಟೇರ್‌ 2000 ಟನ್‌ ಉತ್ಪಾದನೆ, ಸಜ್ಜೆ (ಖುಷ್ಕಿ), 2000 ಹೆಕ್ಟೇರ್‌ 2900 ಟನ್‌, (ನೀರಾವರಿ), 40 ಹೆಕ್ಟೇರ್‌ 88 ಟನ್‌, ಇತರೆ 15 ಹೆಕ್ಟೇರ್‌ 7.5 ಟನ್‌ ಉತ್ಪಾದನೆ ಸೇರಿ ಒಟ್ಟು ತೃಣಧಾನ್ಯ 3665 ಹೆಕ್ಟೇರ್‌ನಲ್ಲಿ 8247.5 ಮ್ಯಾಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

Advertisement

ಬೇಳೆಕಾಳು: ಐದು ಹೋಬಳಿ ಕೇಂದ್ರದಲ್ಲಿ ಒಟ್ಟು ಬೇಳೆಕಾಳುಗಳ 107000 ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ 118416 ಮ್ಯಾಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

ತೊಗರಿಗೆ (ಖುಷ್ಕಿ), 93600 ಹೆಕ್ಟೇರ್‌, 107640 ಮ್ಯಾಟ್ರಿಕ್‌ ಟನ್‌, ನೀರಾವರಿ 500 ಹೆಕ್ಟೇರ್‌, 775 ಟನ್‌, ಹುರಳಿ (ಖುಷ್ಕಿ), 35 ಹೆಕ್ಟೇರ್‌ 21 ಟನ್‌, ಉದ್ದು 6500 ಹೆಕ್ಟೇರ್‌ 5200 ಟನ್‌, ಹೆಸರು (ಖುಷ್ಕಿ), 6300 ಹೆಕ್ಟೇರ್‌ 4725 ಟನ್‌, ಅಲಸಂದಿ 15 ಹೆಕ್ಟೇರ್‌ ಒಂಭತ್ತು ಟನ್‌, ಅವರೆ 30 ಹೆಕ್ಟೇರ್‌ 33 ಟನ್‌, ಮಟಕಿ 20 ಹೆಕ್ಟೇರ್‌ನಲ್ಲಿ 13 ಟನ್‌ ಉತ್ಪಾದನೆ ಗುರಿಯಿದೆ.

ಎಣ್ಣೆ ಕಾಳು: ಒಟ್ಟು ಎಣ್ಣೆಕಾಳು 14635 ಹೆಕ್ಟೇರ್‌ನಲ್ಲಿ 22416 ಟನ್‌ ಉತ್ಪಾದನೆ ಗುರಿಯಿದೆ. ಈ ಪೈಕಿ ಶೇಂಗಾ (ಖುಷ್ಕಿ), 200 ಹೆಕ್ಟೇರ್‌ನಲ್ಲಿ 250 ಟನ್‌ ಗುರಿ, ನೀರಾವರಿ 50 ಹೆಕ್ಟೇರ್‌ನಲ್ಲಿ 100 ಟನ್‌, ಎಳ್ಳು (ಖುಷ್ಕಿ), 750 ಹೆಕ್ಟೇರ್‌ನಲ್ಲಿ 525 ಟನ್‌ ಗುರಿಯಿದೆ, ಸೂರ್ಯಕಾಂತಿ (ಖುಷ್ಕಿ), 5010 ಹೆಕ್ಟೇರ್‌ 4509 ಟನ್‌, ನೀರಾವರಿ 565 ಹೆಕ್ಟೇರ್‌ನಲ್ಲಿ 1017 ಟನ್‌, ಔಡಲ (ಖುಷ್ಕಿ), 20 ಹೆಕ್ಟೇರ್‌ ಐದು ಟನ್‌, ಗುರೆಳ್ಳು (ಖುಷ್ಕಿ), 40 ಹೆಕ್ಟೇರ್‌ 10 ಟನ್‌, ಸೋಯಾಬಿನ್‌ (ಖುಷ್ಕಿ), 8000 ಹೆಕ್ಟೇರ್‌ನಲ್ಲಿ 1600 ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

ವಾಣಿಜ್ಯ ಬೆಳೆ: ಹೈಬ್ರಿಡ್‌ ಹತ್ತಿ (ಖುಷ್ಕಿ), 600 ಹೆಕ್ಟೇರ್‌ 4200 ಟನ್‌ ಉತ್ಪಾದನೆ, ಕಬ್ಬು ಹೊಸ ನಾಟಿ 1200 ಹೆಕ್ಟೇರ್‌, 120000 ಟನ್‌ ಕಬ್ಬು (ಕುಳೆ, ಹಳೆಯ ಗದ್ದೆ), 4031 ಹೆಕ್ಟೇರ್‌ 322480 ಟನ್‌ ಹೀಗೆ ಒಟ್ಟು ವಾಣಿಜ್ಯ ಬೆಳೆಗಳು 5831 ಹೆಕ್ಟೇರ್‌ ಪೈಕಿ 446680 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿಹೊಂದಲಾಗಿದೆ.

ಒಟ್ಟು ಮುಂಗಾರು ವಿಸ್ತೀರ್ಣ 131131 ಹೆಕ್ಟೇರ್‌ 595760 ಉತ್ಪಾದನೆ ಗುರಿಯಿದ್ದು, ಇದರಲ್ಲಿ ಒಟ್ಟು ಆಹಾರ ಬೆಳೆಗಳ ವಿಸ್ತೀರ್ಣ ಕ್ಷೇತ್ರ 110665 ಹೆಕ್ಟೇರ್‌ ಪೈಕಿ 1266635 ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಹೊಂದಲಾಗಿದೆ.

ಮುಂಗಾರು ಬಿತ್ತನೆಗಾಗಿ ರಿಯಾಯ್ತಿ ದರದಲ್ಲಿ ಐದು ಎಕರೆ ವರೆಗೆ ಎಲ್ಲ ರೈತರಿಗೆ ವಿತರಣೆ ಕೈಗೊಳ್ಳಲು ಬಿತ್ತನೆ ಬೀಜಗಳ ದಾಸ್ತಾನು ಕೈಗೊಳ್ಳಲಾಗಿದೆ. ತೊಗರಿ 290 ಕ್ವಿಂಟಲ್, ಹೆಸರು 46 ಕ್ವಿಂಟಲ್, ಉದ್ದು 84 ಕ್ವಿಂಟಲ್ ಮತ್ತು ಸೋಯಾಬಿನ್‌ ಒಂದು ಸಾವಿರ ಕ್ವಿಂಟಲ್ ದಾಸ್ತಾನು ಕೈಗೊಳ್ಳಲಾಗಿದೆ. ಮಳೆ ಅವಲಂಬನೆ ಮೇಲೆ ಬಿತ್ತನೆ ಬೀಜ ಹಾಗೂ ಕ್ಷೇತ್ರದ ವಿಸ್ತಾರ ಮನಗಂಡು ಬೀಜಗಳನ್ನು ವಿತರಿಸಿದ ಬಳಿಕವೂ ಕೊರತೆಯಾಗುವ ಬೀಜನಗಳ ದಾಸ್ತಾನು ಕೈಗೊಂಡು ವಿತರಣೆ ಮಾಡಲಾಗುವುದು. ಬಿಸಲಿನ ತಾಪ ಹೆಚ್ಚಿದ್ದು, ಒಣ ಹವೆ ಮುಂದುವರಿದಿದ್ದು, ಮುಂದಿನವಾರ ಮಳೆಯಾಗುವ ನಿರೀಕ್ಷೆಯಿದೆ.
ಶರಣಗೌಡ ಪಾಟೀಲ,
ಸಹಾಯಕ ಕೃಷಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next